ಶಿವಳ್ಳಿ ರಸ್ತೆಯಲ್ಲಿ ಗಾಂಜಾ ಮಾರಾಟ: ಕಾರು ಸಮೇತ ಇಬ್ಬರ ಬಂಧನ
1 min read
ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಗಾಂಜಾ ಮಾರಾಟ ಕಡಿಮೆಯಾಗಿದೆ ಎಂದುಕೊಂಡವರಿಗೆ ಮತ್ತೆ ಆರ್ಥಿಕ ಅಪರಾಧ ಮತ್ತು ಮಾದಕ ವಸ್ತುಗಳ ಅಪರಾಧ ವಿಭಾಗದ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧನ ಮಾಡುವ ಮೂಲಕ, ಹುಬ್ಬಳ್ಳಿಯಲ್ಲಿ ಗಾಂಜಾ ಘಮಟು ಕಡಿಮೆಯಾಗಿಲ್ಲ ಎನ್ನುವಂತಾಗಿದೆ.
ಇದಕ್ಕೆ ಕಾರಣವಾಗಿದ್ದು, ಇಬ್ಬರ ಬಂಧನ. ಶಂಕರ ಕೋಕಟೆ ಹಾಗೂ ಭೀಮಾ ಕಬ್ಬಿನ ಎಂಬುವರೇ ಹುಬ್ಬಳ್ಳಿಯ ಗೋಪನಕೊಪ್ಪ ಶಿವಳ್ಳಿ ರೋಡ ಓವರ್ ಬ್ರಿಡ್ಜ್ ಬಳಿ ಗಾಂಜಾವನ್ನು ಕಾರಿನಲ್ಲಿ ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ಮಾಡಿ 738 ಗ್ರಾಂ ತೂಕದ ಗಾಂಜಾ, ಎರಡು ಮೊಬೈಲ್ ಹಾಗೂ ಕಾರನ್ನ ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಕಮೀಷನರ್ ಲಾಬುರಾಮ್ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಎಂ.ಎಸ್. ಹೂಗಾರ ನೇತೃತ್ವದಲ್ಲಿ ಪಿಎಸ್ಐ ಎಸ್. ಜಿ. ಕಾಣಕಟ್ಟಿ, ಸಿಬ್ಬಂದಿಗಳಾದ ಬಸುರಾಜ ಪಶುಪತಿಹಾಳ, ಎಸ್ ಎಂ ಕುರಹಟ್ಟಿ, ಪಿ ಕೆ ಬಿಕ್ಕನಗೌಡ್ರು, ಎಂ ಡಿ ಬಡಿಗೇರ, ರವಿ ಕೋಳಿ, ಪಕ್ಕಿರೇಶ ಸುನಾಗರ, ಜಯಶ್ರೀ ಚಿಲ್ಲೂರ್ ಹಾಗೂ ಪಕ್ಕಿರೇಶ ಗೊಬ್ಬರಗುಂಪಿ ಭಾಗಿಯಾಗಿದ್ದರು.
ಹುಬ್ಬಳ್ಳಿ-ಧಾರವಾಡ ಸೇರಿದಂತೆ ಸುತ್ತ ಮುತ್ತಲೂ ಪ್ರದೇಶದಲ್ಲೂ ಪೊಲೀಸರು ಇಂತಹ ಪ್ರಕರಣಗಳನ್ನ ಪತ್ತೆ ಹಚ್ಚಿ ಆರೋಪಿಗಳನ್ನ ಹೆಡಮುರಿಗೆ ಕಟ್ಟುತ್ತಿರುವುದು ಪ್ರಜ್ಞಾವಂತರಲ್ಲಿ ಸಂತಸ ಮೂಡಿಸಿದೆ.