ದೀಪವಾರಿಸಿದ ಮನೆಯ ದೀಪ- ಶಿವಗಂಗಾ…!
1 min read
ಹುಬ್ಬಳ್ಳಿ: ತನ್ನದೇ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿಯೋರ್ವಳಿಗೆ ದೇವರು ಮನೆಯಲ್ಲಿಟ್ಟ ದೀಪ ತಗುಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ನಡೆದಿದೆ.
ನೂಲ್ವಿಯಲ್ಲಿ ಮನೆಯಲ್ಲಿ ಹಚ್ಚಿಟ್ಟ ದೀಪ ಆಟ ಆಡುವಾಗ ಬಾಲಕಿಯ ಮೇಲೆ ಬಿದ್ದ ಪರಿಣಾಮ ಏಳು ವರ್ಷದ ಹೆಣ್ಣು ಮಗುವೊಂದು ಸುಟ್ಟು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಶಿವಗಂಗಾಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ದೇಹದ ಸುಮಾರು ಶೇಕಡಾ 30ರಷ್ಟು ಭಾಗದಷ್ಟು ಸುಟ್ಟಿದರಿಂದ ಶಿವಗಂಗಾ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾಳೆ.
ನೂಲ್ವಿಯ ಹನುಮಂತಪ್ಪ ಬಾರಕೇರ್ ಎಂಬುವರ ಏಳು ವರ್ಷದ ಮಗು ಶಿವಗಂಗಾ ಎಂದು ತಿಳಿದು ಬಂದಿದ್ದು, ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.