ಡಿಸೆಂಬರ್ ಮೊದಲ ವಾರದಿಂದ ಶಾಲೆಗಳು ಆರಂಭ
1 min read
ಬೆಂಗಳೂರು: ರಾಜ್ಯದಲ್ಲಿ ಶಾಲೆ ಆರಂಭಕ್ಕೆ ಮುಹೂರ್ತ ಕೂಡಿ ಬಂದಿದ್ದು, ಶಾಲೆಗಳ ಆರಂಭಕ್ಕೆ ಕಾಲ ಕೂಡಿ ಬಂದಿದ್ದು, ಡಿಸೆಂಬರ್ ಮೊದಲ ವಾರದಲ್ಲಿ 9ರಿಂದ 12ನೇ ತರಗತಿಗಳು ಆರಂಭವಾಗುವುದು ಖಚಿತವಾಗಿದೆ.
ಶಾಲೆಗಳ ಆರಂಭ ಕುರಿತಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಪೋಷಕರು, ಎಸ್ ಡಿಎಂಸಿ ಸದಸ್ಯರು, ತಜ್ಞರ ಜೊತೆ ನಡೆಸಿದ ಅಭಿಪ್ರಾಯಗಳನ್ನ ಸಮಗ್ರವಾಗಿ ಕ್ರೋಡಿಕರಿಸಲಾಗಿದೆ. ಈ ವರದಿಯನ್ನ ಇಲಾಖೆಯ ಆಯುಕ್ತ ಅನ್ಬುಕುಮಾರ, ಪ್ರಧಾನ ಕಾರ್ಯದರ್ಶಿ ಉಮಾಶಂಕರ ಅವರಿಗೆ ನೀಡಿದ್ದಾರೆ.
ಶಿಕ್ಷಣ ಸಚಿವರು ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದು, ನಂತರ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ, ಅಂತಿಮ ತೀರ್ಮಾನಕ್ಕೆ ಬರಲು ನಿರ್ಧರಿಸಲಾಗಿದೆ. ನವೆಂಬರ್ 17ರಂದು ಪದವಿ ಕಾಲೇಜುಗಳು ಆರಂಭಗೊಳ್ಳುತ್ತಿದ್ದು, ಮುಂದಿನ ಸ್ಥಿತಿಗತಿ ಅವಲೋಕಿಸಿ, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯನ್ನ ಇಲಾಖೆ ನಿರ್ಧರಿಸಲಿದೆ.
9 ರಿಂದ 12ನೇ ತರಗತಿಗಳ ಆರಂಭಿಸಿದ ನಂತರದ ಪರಿಸ್ಥಿತಿಯನ್ನ ನೋಡಿಕೊಂಡು ಕೆಳಹಂತದ ಶಾಲೆಗಳನ್ನ ಆರಂಭಿಸಲು ಕ್ರಮವನ್ನ ಶಿಕ್ಷಣ ಇಲಾಖೆ ತೆಗೆದುಕೊಳ್ಳಲಿದೆ.