ಹುಬ್ಬಳ್ಳಿಯ ಎರಡು ಖಾಸಗಿ ಶಾಲೆಗಳ ನೋಂದಣಿ ರದ್ದು
1 min read![](https://karnatakavoice.com/wp-content/uploads/2021/02/580827_329302020464712_803491407_n.jpg)
ಹುಬ್ಬಳ್ಳಿ: ಸರ್ಕಾರದ ನಿಯಮಾನುಸಾರ ಅನುಮತಿ ಪಡೆಯದೇ ಶಾಲೆಯನ್ನು ಪ್ರಾರಂಭಿಸಿರುವ, ಹುಬ್ಬಳ್ಳಿ ಲೋಹಿಯಾ ನಗರದ ರೇಣುಕಾ ಎಜ್ಯುಕೇಶನ್ ಟ್ರಸ್ಟ್ ರೇಣುಕಾ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಕಾರವಾರ ರಸ್ತೆ ಅಪ್ಪಾ ಎಜ್ಯಕೇಶನ್ ಸೊಸೈಟಿ ಅಪ್ಪಾ ಕಿರಿಯ ಪ್ರಾಥಮಿಕ ಶಾಲೆ ನೋಂದಣಿಯನ್ನು ರದ್ದುಗೊಳಿಸಿ, ಸಾರ್ವಜನಿಕ ಶಿಕ್ಷಣ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಸದರಿ ಶಾಲೆಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಮಕ್ಕಳ ಪಾಲಕರು ಮಕ್ಕಳನ್ನು 2020-21ನೇ ಸಾಲಿಗೆ ಸಮೀಪದ ಸರಕಾರಿ, ಅನುದಾನಿತ ಅಥವಾ ಅನುದಾನರಹಿತ ಶಾಲೆಗಳಿಗೆ ದಾಖಲು ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಈಗಾಗಲೇ ಪಾಲಕರು ಮಾಹಿತಿಯನ್ನ ಸಂಗ್ರಹಿಸಿ ಮಕ್ಕಳನ್ನ ಬೇರೆ ಶಾಲೆಗಳಲ್ಲಿ ದಾಖಲು ಮಾಡಬೇಕು. ಈ ಎರಡು ಸಂಸ್ಥೆಗಳು ಅನುಮತಿಯನ್ನ ಪಡೆಯದೇ ಶಾಲೆಗಳನ್ನ ಆರಂಭಿಸಿದ್ದು, ಈ ಬಗ್ಗೆ ನೋಟೀಸ್ ಕೊಟ್ಟರೂ ಯಾವುದೇ ರೀತಿಯ ಉತ್ತರ ಸಿಗದ ಹಿನ್ನೆಲೆಯಲ್ಲಿ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ.