Posts Slider

Karnataka Voice

Latest Kannada News

ಸಂತೋಷ ಲಾಡ್ ನಾಡಿದ್ದು ಮತ್ತೆ ಯಲ್ಲಾಪುರ ಕ್ಷೇತ್ರಕ್ಕೆ

1 min read
Spread the love

ಧಾರವಾಡ: ಮಾಜಿ ಸಚಿವ ಸಂತೋಷ ಲಾಡ ಕಳೆದ ಬಾರಿ ಯಲ್ಲಾಪುರಕ್ಕೆ ಭೇಟಿ ನೀಡಿದ ಸಮಯದಲ್ಲಿ ಅಲ್ಲೇ ಚುನಾವಣೆಗೆ ನಿಲ್ಲುತ್ತಿದ್ದಾರೆಂಬ ವದಂತಿಗಳು ಹಬ್ಬಿದ್ದವು. ಆದರೆ, ಅದನ್ನ ನಿರಾಕರಿಸಿದ್ದ ಸಂತೋಷ ಲಾಡ ನಾಡಿದ್ದು ಮತ್ತೆ ಯಲ್ಲಾಪುರ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.

ಕಲಘಟಗಿ ಕ್ಷೇತ್ರದಲ್ಲೇ ಚುನಾವಣೆಗೆ ನಿಲ್ಲುವುದು ಎಂದು ಹೇಳಿರುವ ಸಂತೋಷ ಲಾಡ ಅವರು, ಪಕ್ಕದ ತಾಲೂಕಿನಲ್ಲಿಯೂ ಪಕ್ಷದ ಸಂಘಟನೆಯನ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿದ್ದ ಹಾಲಿ ಸಚಿವ ಅರಬೈಲು ಹೆಬ್ಬಾರ ಅವರು ಪಕ್ಷ ಬಿಟ್ಟು ನಂತರ, ಯಲ್ಲಾಪುರ ಕ್ಷೇತ್ರದಲ್ಲಿಯೂ ಪಕ್ಷದ ಜವಾಬ್ದಾರಿಯನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ, ಸಂತೋಷ ಲಾಡರವರಿಗೆ ನೀಡಿದ್ದಾರೆ. ನಾಡಿದ್ದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬನವಾಸಿ ನಗರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.

ಸಂತೋಷ್ ಲಾಡ್ ಮಾಜಿ ಕ್ಯಾಬಿನೆಟ್ ಸಚಿವರ  ಪ್ರವಾಸದ ವಿವರ :

ದಿನಾಂಕ 24 -12 -2020 , ರಂದು ಬೆಂಗಳೂರಿನಿಂದ ವಿಮಾನ ಮೂಲಕ ಮಧ್ಯಾಹ್ನ 3:00 ಘಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮನ.

ನಂತರ ಸಂಜೆ 4 : 00  ಘಂಟೆಯಿಂದ ರಾತ್ರಿ 9:00 ಘಂಟೆ ವರೆಗೆ ಕಲಘಟಗಿ ಅಮೃತ ನಿವಾಸದಲ್ಲಿ ತಾಲೂಕಿನ ಮುಖಂಡರು, ಕಾಯ೯ಕತ೯ರೊಂದಿಗೆ ಸಮಾಲೋಚನೆ ನಡೆಸಿ. ರಾತ್ರಿ ಅಮೃತ ನಿವಾಸದಲ್ಲಿ ವಾಸ್ತವ್ಯ ಮಾಡುವರು.

ದಿನಾಂಕ 25 – 12 – 2020 ಕಲಘಟಗಿಯಿಂದ ಹೊರಟು ಮುಂಜಾನೆ 10 ರಿಂದ ಸಂಜೆ 6:30 ರ ವರಗೆ ಯಲ್ಲಾಪುರ ವಿಧಾನ ಸಭಾ ಮತ ಕ್ಷೇತ್ರದ ಬನವಾಸಿ ನಗರದಲ್ಲಿ ಕಾಂಗ್ರೆಸ್ ಪಕ್ಷದ ಕಾಯ೯ಕತ೯ರ ಜೊತೆ  ಸಮಾಲೋಚನೆ ನಡೆಸುವರು.  

ನಂತರ ರಾತ್ರಿ 8:00 ಘಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಮಂಜುನಾಥಗೌಡ ಮುರಳ್ಳಿ

ಅಧ್ಯಕ್ಷರು

ಬ್ಲಾಕ್ ಕಾಂಗ್ರೆಸ್ ಕಲಘಟಗಿ


Spread the love

Leave a Reply

Your email address will not be published. Required fields are marked *