ಬದಾಮಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ: ತಪ್ಪದೇ ಹಾಜರಾಗಲು ಕೋರಿಕೆ
1 min read
ಧಾರವಾಡ: ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಎಂಟನೇಯ ರಾಜ್ಯ ಕಾರ್ಯಕಾರಿಣಿ ಸಭೆ ನವೆಂಬರ್ 22ರಂದು ನಡೆಯಲಿದ್ದು, ಪದಾಧಿಕಾರಿಗಳು ತಪ್ಪದೇ ಹಾಜರಿರಬೇಕೆಂದು ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯ ಸಂಘ, ಬಾಗಲಕೋಟೆ ಜಿಲ್ಲಾ ಘಟಕ ಹಾಗೂ ಬದಾಮಿ ತಾಲೂಕು ಘಟಕದ ಸಹಯೋಗದಲ್ಲಿ ರಾಜ್ಯ ಉಪಾಧ್ಯಕ್ಷ ಹನಮಂತಪ್ಪ ಮೇಟಿ, ರಾಮಪ್ಪ ಹಂಡಿ, ಜಿಲ್ಲಾಧ್ಯಕ್ಷ ಎಮ್ಮಿಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಾಣಿಗೇರ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಸಂಘದ ಮನವಿ ಹೀಗಿದೆ
ಸರ್ವಮಾನ್ಯ ನಮ್ಮ ಸಂಘದ ರಾಜ್ಯ ಘಟಕದ ಎಲ್ಲ ಪದಾಧಿಕಾರಿಗಳು ರಾಜ್ಯ ಕಾರ್ಯ ಕಾರಿಣಿ ಸಮಿತಿಯ ಎಲ್ಲ ಸದಸ್ಯರು ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಅಧ್ಯಕ್ಷರು ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಇವರಿಗೆ..
ವಿಷಯ: ಎಂಟನೇ ರಾಜ್ಯ ಕಾರ್ಯ ಕಾರಿಣಿ ಸಭೆಗೆ ತಪ್ಪದೇ ಹಾಜರಾಗುವ ಕುರಿತು
ಮಾನ್ಯರೆ
ಮೇಲ್ಕಾಣಿಸಿದ ವಿಷಯಾನುಸಾರ ತಮ್ಮೆಗೆಲ್ಲರಿಗೂ ಈಗಾಗಲೇ ತಿಳಿಸಿರುವಂತೆ ದಿನಾಂಕ: 22.11.2020 ರಂದು ರವಿವಾರ ಮುಂಜಾನೆ 10 ಗಂಟೆಗೆ ಬಾಗಲಕೋಟೆ ಜಿಲ್ಲೆಯ ಬದಾಮಿಯಲ್ಲಿ ನಮ್ಮ ರಾಜ್ಯ ಸಂಘದ ಹಾಗೂ ಬಾಗಲಕೋಟೆ ಜಿಲ್ಲಾ ಘಟಕ ಹಾಗೂ ಬದಾಮಿ ತಾಲೂಕಾ ಘಟಕ ಇವರ ಸಹಯೋಗದಲ್ಲಿ ಮತ್ತು ರಾಜ್ಯ ಉಪಾಧ್ಯಕ್ಷರಾದ ಶ್ರೀ ಹನುಮಂತಪ್ಪ ಮೇಟಿ.ಶ್ರೀ ರಾಮಪ್ಪ ಹಂಡಿ.ಜಿಲ್ಲಾಧ್ಯಕ್ಷರಾದ ಶ್ರೀ ಎಮ್ಮಿಮಠ ಹಾಗೂ ಜಿಲ್ಲಾ ಪ್ರ.ಕಾ.ಶ್ರೀಮತಿ ಗಾಣಿಗೇರ ಇವರುಗಳ ನೇತೃತ್ವದಲ್ಲಿಎಂಟನೇ ಕಾರ್ಯಕಾರಿಣಿ ಸಭೆ ಜರುಗಲಿದೆ.ಸದರಿ ಸಭೆಗೆ ಅತಿ ಉನ್ನತ ಹಂತದ ಮಾನ್ಯ ಜನ ನಾಯಕರು ಅತಿ ಉನ್ನತ ಹಂತದ ಮಾನ್ಯ ಅಧಿಕಾರಿಗಳು ಹಾಗೂ ಶ್ರಮಿಕ ರತ್ನ ಪುರಸ್ಕೃತರು ಆಗಮಿಸಲಿರುವರು.ಕಾರಣ ತಾವೆಲ್ಲರೂ ಸಕಾಲಕ್ಕೆ ಆಗಮಿಸಿ ಶಿಕ್ಷಕರ ವಿದ್ಯಾರ್ಥಿಗಳ ಶಾಲೆಗಳ ಶಿಕ್ಷಣದ ಗ್ರಾಮೀಣ ಪ್ರದೇಶದ ಹಾಗೂ ಸಂಘದ ಬಲವರ್ಧನೆಗೆ ಪೂರಕವಾದ ಸಲಹೆ ಸೂಚನೆಗಳನ್ನು ಲಿಖಿತವಾಗಿ ಮಂಡಿಸಿ ಮಾರ್ಗದರ್ಶನ ನೀಡಿ ಸಭೆ ಸಮಾರಂಭ ಯಶಶ್ವಿಗೊಳಿಸಬೇಕೆಂದು ಈ ಮೂಲಕ ರಾಜ್ಯ ಘಟಕವು ವಿನಮ್ರವಾಗಿ ವಿನಂತಿಸಿಕೊಳ್ಳುತ್ತದೆ.