ಹುಬ್ಬಳ್ಳಿ-ಧಾರವಾಡದಲ್ಲಿ ಅಕ್ರಮ “12” ಗಾಲಿ ಮರಳು: ಕಣ್ಣುಮುಚ್ಚಿ ಕುಳಿತರಾ ಅಧಿಕಾರಿಗಳು..?
1 min read
ಧಾರವಾಡ: 6 ಗಾಲಿಯ ಲಾರಿ ಅಥವಾ ಟಿಪ್ಪರ್ ಗಳಿಗೆ ಮಾತ್ರ ಪರವಾನಿಗೆ ಇರುವ ಮರಳು ಸಾಗಾಟ, ಅವಳಿನಗರದಲ್ಲಿ 12 ಗಾಲಿಗಳ ಟಿಪ್ಪರ(ಲಾರಿ)ನಿಂದ ಎಗ್ಗಿಲ್ಲದೇ ನಡೆಯುತ್ತಿದ್ದು, ಇದನ್ನ ನೋಡಿ ಅಕ್ರಮ ತಡೆಯಬೇಕಾದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದು, ಪೊಲೀಸರನ್ನೂ ದಾರಿ ತಪ್ಪಿಸುವ ಪ್ರಯತ್ನಕ್ಕೆ ಇಳಿದಿದ್ದಾರೆಂದು ಹೇಳಲಾಗುತ್ತಿದೆ.
ಧಾರವಾಡ ಜಿಲ್ಲೆಯಲ್ಲಿ ಪ್ರತಿ ದಿನವೂ 150 ರಿಂದ 250 ಟಿಪ್ಪರ್ ಮರಳು ಬೇರೆ ಬೇರೆ ಜಿಲ್ಲೆಗಳಿಂದ ಬರುತ್ತದೆ. ಅದರಲ್ಲಿ 50 ರಿಂದ 130 ಟಿಪ್ಪರ್ ಮರಳು ಅವಳಿನಗರವೊಂದರಲ್ಲೇ ಖಾಲಿ ಮಾಡಲಾಗುತ್ತಿದೆ. ಇವುಗಳಿಗೆ ಪಾಸ್ ಇರುವುದೇ ಕಡಿಮೆ. ಅಷ್ಟೇ ಅಲ್ಲ, ಪರ್ಮಿಟನಲ್ಲಿ ಇರುವ ಟನ್ ಬೇರೆ, ಟಿಪ್ಪರನಲ್ಲಿ ಇರುವ ಮರಳು ಟನ್ ಹೆಚ್ಚಿಗೆ ಇರುತ್ತದೆ. ಆದರೂ, ಸಬ್ ಚಲ್ತಾ ಹೈ ಎನ್ನುವಂತಾಗಿದೆ.
ಕಳೆದ ಎರಡು ದಿನದ ಹಿಂದೆ ಧಾರವಾಡ ತಾಲೂಕಿನ ನವಲೂರ ಗ್ರಾಮದಲ್ಲಿ 12 ಗಾಲಿಯ ಲಾರಿ ಮರಳನ್ನ ಡಂಪ್ ಮಾಡಿ ಹೋಗಿದೆ. ಅಷ್ಟೊಂದು ದೊಡ್ಡ ವಾಹನ ಸಿಟಿಯೊಳಗೆ ಬಂದು ಹೋಗುವುದು ಯಾರಿಗೂ ಗೊತ್ತೆಯಾಗುವುದಿಲ್ಲ ಎನ್ನೋ ಥರಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇರುತ್ತಿರುವುದನ್ನ ನೋಡಿದರೇ, ದಾಲ್ ಮೇ ಕುಚ್ ಕಾಲಾ ಹೈ ಎನ್ನುವಂತಾಗಿದೆ.
ಮಧ್ಯಮ ವರ್ಗದ ಜನರ ಮೇಲೆ ಅಕ್ರಮ ಮರಳು ಸಾಗಾಟ ಪರಿಣಾಮ ಬೀರತ್ತೆ. ಇವರು ಹೇಳಿದ ದರಕ್ಕೆ ಮರಳನ್ನ ಪಡೆಯಬೇಕಾದ ಸ್ಥಿತಿ ಬಂದೋದಗಿದೆ. ಹಾಗಾಗಿ, ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಕಣ್ಣು ಮುಚ್ಚದೇ ಕೆಲಸ ಮಾಡುತ್ತಾರಾ ಇಲ್ಲವೇ ದಕ್ಷ ಅಧಿಕಾರಿ ಪೊಲೀಸ್ ಕಮೀಷನರ್ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳಿಗೆ ಕಣ್ಣು ತೆರೆಸುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.