Posts Slider

Karnataka Voice

Latest Kannada News

ವಾಹನಗಳ ಹೊಗೆ ಜನಜೀವನಕ್ಕೆ ಒಳ್ಳೆಯದಲ್ಲ: ಆಪರ್ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ

1 min read
Spread the love

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸುಮಾರು 6 ಲಕ್ಷಗಳಷ್ಟು ವಾಹನಗಳಿವೆ ಇವುಗಳು ಹೊರಸೂಸುವ ಹೊಗೆಯು ಜನ ಜೀವನಕ್ಕೆ ಒಳ್ಳೆಯದಲ್ಲ, ವೈಯಕ್ತಿಕ ವಾಹನಗಳ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ಸಂಚಾರ ಸೇವೆಯನ್ನು ಬಳಸಿ ವಾಯುಮಾಲಿನ್ಯ ತಡೆಗಟ್ಟಬೇಕು ಎಂದು ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ ಹೇಳಿದರು.

ಇಂದು ಗಬ್ಬೂರಿನ ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯಲ್ಲಿ ಆಯೋಜಿಸಲಾಗಿದ್ದ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಸಮಾರಂಭ ಉದ್ಘಾಟಸಿ ಮಾತನಾಡಿದರು. ಅವಳಿ ನಗರದ ಜನತೆಯ ಅನುಕೂಲಕ್ಕಾಗಿ ಬಿ.ಆರ್.ಟಿ.ಎಸ್. ಸೇವೆಯು ಲೋಕಾರ್ಪಣೆ ಮಾಡಲಾಗಿದೆ. ತ್ವರಿತ ಸಂಚಾರ ಸೇವೆಯನ್ನು ನೀಡುವ ಬಿ.ಆರ್.ಟಿ.ಎಸ್ ಸೇವೆ ಪಡೆಯುವುದರ ಮೂಲಕ ವೈಯಕ್ತಿಕ ವಾಹನಗಳನ್ನು ಅತೀ ವಿರಳವಾಗಿ ಬಳಸಬೇಕು. ಸಮೂಹ ಸಾರಿಗೆಯತ್ತ ಒಲವು ತೋರಲು ಆ ಮೂಲಕ ಸಮಾಜದ ಒಳಿತಿಗಾಗಿ ಶ್ರಮಿಸಿ, ಪರಿಸರವನ್ನು ರಕ್ಷಿಸುವತ್ತ ಹೆಜ್ಜೆ ಹಾಕೋಣ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲತ್ವಾಡಮಠ, ಹುಬ್ಬಳ್ಳಿ-ಧಾರವಾಡ ಅವಳ ನಗರದಲ್ಲಿ ವಾಹನಗಳ ಸಂಖ್ಯೆ ಕಳೆದ 10 ವರ್ಷಗಳಲ್ಲಿ ದ್ವಿಗುಣವಾಗಿದೆ.ವಾಹನಗಳಿಂದ ಹೊರಸೂಸುವ ಕಾರ್ಬನ್ ಮಾನಾಕ್ಸೈಡ್ ಮಾನವರ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಉಂಟುಮಾಡುತ್ತದೆ. ಆದಷ್ಟು ಸಮೂಹ ಸಾರಿಗೆಗಳಲ್ಲಿ ಸಾರ್ವಜನಿಕರು ಸಂಚರಿಸಬೇಕು ಎಂದು ಕರೆ ನೀಡಿದರು. ಪ್ರತಿ ವರ್ಷಕ್ಕೊಮ್ಮೆ ತಮ್ಮ ವಾಹನಗಳನ್ನು ವಾಯು ಮಾಲಿನ್ಯ ಮಾಪನ ಕೇಂದ್ರಗಳಲ್ಲಿ ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಿ ವಾಯು ಮಾಲಿನ್ಯ ನಿಯಂತ್ರಣ ಹೊಂದಿರುವ ಬಗ್ಗೆ ಪ್ರಮಾಣ ಪತ್ರ ಪಡೆಯಬೇಕು.

ವಾಹನಗಳನ್ನು ಉತ್ತಮ ಸ್ಥಿತಿಯಲ್ಲಿ ಕಾಪಾಡಿಕೊಳ್ಳಬೇಕು. ವಾಹನಗಳುಹೆಚ್ಚು ಹೊಗೆಯನ್ನು ಸೂಸುತ್ತಿದ್ದಲ್ಲಿ ಅವುಗಳನ್ನು ದುರಸ್ತಿಗೊಳಿಸಿಕೊಳ್ಳುವಂತೆ ಹೇಳಿದರು. ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಲಾರಿ ಮಾಲಕರ ಸಂಘ ಅಧ್ಯಕ್ಷ ಗೈಬುಸಾಬ್ ಹೊನ್ಯಾಳ, ಹುಬ್ಬಳ್ಳಿ ಆಟೋರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಉಪಾಧ್ಯಕ್ಷ ಚಿದಾನಂದ ಸವದತ್ತಿ, ಸೇರಿದಂತೆ ಮೋಟಾರು ವಾಹನ ತರಬೇತಿ ಶಾಲೆಯ ಪ್ರಾಂಶುಪಾಲರುಗಳು ಹಾಗೂ ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳ ಮುಖ್ಯಸ್ಥರು, ಸಾರಿಗೆ ಅಧಿಕಾರಿಗಳ ಕಛೇರಿ ಪಾಲ್ಗೊಂಡಿದ್ದರು. ವಾಯು ಮಾಲಿನ್ಯದ ಕುರಿತಾದ ಸ್ಟಿಕ್ಕರ್ ಹಾಗೂ ಕರಪತ್ರಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.


Spread the love

Leave a Reply

Your email address will not be published. Required fields are marked *