Posts Slider

Karnataka Voice

Latest Kannada News

ಎಮಿಶನ್ ಟೆಸ್ಟ್ ಪ್ರೀ- ದಂಡ ಕಟ್ಟುವ ಮುನ್ನವೇ ಮಾಡಿಸಿಕೊಂಡು ಬಿಡಿ: ಸೋಮವಾರ ನಿಮಗಿದೆ ಅವಕಾಶ

1 min read
Spread the love

ಹುಬ್ಬಳ್ಳಿ: ಸಂಚಾರಿ ನಿಯಮಗಳನ್ನ ಪಾಲಿಸುವಾಗ ಹಲವು ಸಮಸ್ಯೆಗಳು ಬಂದಿರುತ್ತವೆ. ಬಹುತೇಕರು ವಾಯು ಮಾಲಿನ್ಯ ಪರೀಕ್ಷೆಯನ್ನ ಮಾಡಿಸಿಕೊಂಡಿರಲ್ಲ. ಹಾಗಾಗಿಯೇ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಆಚರಣೆ ಮಾಡುತ್ತಿದ್ದು, ಆ ಪ್ರಯುಕ್ತ ಎಲ್ಲ ವಾಹನಗಳಿಗೂ ವಾಯು ಮಾಲಿನ್ಯ ಪರೀಕ್ಷೆಯನ್ನ ಉಚಿತವಾಗಿ ಮಾಡಲು ನಿರ್ಧರಿಸಲಾಗಿದೆ.

ಹುಬ್ಬಳ್ಳಿಯ 15 ಕೇಂದ್ರಗಳಲ್ಲಿ ಇಂತಹ ಅವಕಾಶವನ್ನ ಸಾರ್ವಜನಿಕರಿಗೆ ಒದಗಿಸಿದ್ದು, ಸೋಮವಾರ ಬೆಳಗ್ಗೆ 10.30ರಿಂದ ಸಂಜೆ 5 ಗಂಟೆಯೊಳಗೆ ಉಚಿತವಾಗಿ ಎಮಿಶನ್ ಟೆಸ್ಟ್ ಮಾಡಿಸಿಕೊಳ್ಳಬಹುದು. ನಿಮಗೆ ನಿಮ್ಮದೇ ಪ್ರದೇಶದಲ್ಲಿ ಮಾಡಿಕೊಳ್ಳುವ ಅವಕಾಶವನ್ನೂ ನೀಡಲಾಗಿದೆ.

ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಉತ್ತಮ ಕಾರ್ಯಕ್ರಮವನ್ನ ಆಯೋಜನೆ ಮಾಡಿದ್ದು, ಇದರ ಪ್ರಯೋಜನವನ್ನ ವಾಹನ ಮಾಲೀಕರು ಪಡೆದುಕೊಳ್ಳಬೇಕಾಗಿದೆ. ಈ ಮೂಲಕ ಪೊಲೀಸರಿಗೆ ದಂಡ ಭರಿಸುವುದರಿಂದಲೂ ದೂರವುಳಿಬೇಕಾಗಿದೆ.

ಎಲ್ಲ ವಿಧದ ವಾಹನಗಳಿಗೂ ಪರೀಕ್ಷೆಯನ್ನ ಮಾಡಿ ಪ್ರಮಾಣ ಪತ್ರವನ್ನ ನೀಡಲಾಗುವುದೆಂದು ಪ್ರಾದೇಶಿಕ ಆಯುಕ್ತ ಅಪ್ಪಯ್ಯ ನಾಲ್ವತ್ವಾಡಮಠ ಮಾಹಿತಿಯನ್ನ ನೀಡಿದ್ದಾರೆ.


Spread the love

Leave a Reply

Your email address will not be published. Required fields are marked *