Posts Slider

Karnataka Voice

Latest Kannada News

ಬೀದರನಲ್ಲಿ 120 ಟನ್ ಪಡಿತರ ಅಕ್ಕಿ ಪತ್ತೆ: ಹುಬ್ಬಳ್ಳಿಯಿಂದಲೂ ಸರಬರಾಜು..!

1 min read
Spread the love

ಬೀದರ: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 120 ಟನ್ ಪಡಿತರ ಅಕ್ಕಿಯನ್ನ ಲಾರಿ ಸಮೇತ ಬೀದರ ಜಿಲ್ಲೆಯ ಬಸವಕಲ್ಯಾಣದ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

40ಲಕ್ಷ ಮೌಲ್ಯದ ಅಕ್ರಮವಾಗಿ 120ಟನ್  ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ ನಾಲ್ಕು ಲೋಡ್ ಲಾರಿ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಯಾದಗಿರಿ ಜಿಲ್ಲೆಯ ಗುರುಮಿಠಕಲ್ ನಿಂದ ಲೋಡಾಗಿ ಗುಜರಾತಗೆ ಹೊರಟಿದ್ದ ಪಡಿತರ ಅಕ್ಕಿ. ಯಾದಗಿರಿಗೆ ಇಷ್ಟೊಂದು ಪ್ರಮಾಣದಲ್ಲಿ ಪಡಿತರ ಅಕ್ಕಿ ಬರುತ್ತಿರುವುದು ಹೇಗೆ ಎಂದು ವಿಚಾರಣೆ ನಡೆಸಿದಾಗ ಹುಬ್ಬಳ್ಳಿಯಿಂದಲೂ ಇಲ್ಲಿಗೆ ಅಕ್ಕಿ ಬರುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಆದೇಶದ ಮೇರೆಗೆ ದಾಳಿ ಮಾಡಿ ವಶಕ್ಕೆ ನಾಲ್ಕು ಲಾರಿಗಳನ್ನ ಪಡೆದಿದ್ದು, ಸ್ಥಳಕ್ಕೆ ಬಸವಕಲ್ಯಾಣ ತಹಶೀಲ್ದಾರ ಸಾವಿತ್ರಿ ಸಲಗರ ಭೇಟಿ  ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸುವ ಜೊತೆಗೆ ಇಷ್ಟೊಂದು ಪ್ರಮಾಣದಲ್ಲಿ ಪಡಿತರ ಅಕ್ಕಿಯನ್ನ ಸಾಗಾಟ ಮಾಡುತ್ತಿರುವವರನ್ನ ಬಂಧಿಸುವಂತೆ ತಹಶೀಲ್ದಾರ ಆದೇಶ ನೀಡಿದ್ದಾರೆ.


Spread the love

Leave a Reply

Your email address will not be published. Required fields are marked *