ತವನಪ್ಪ ಅಷ್ಟಗಿಯವರನ್ನ ಜೀಪನಲ್ಲಿ ಕರೆದುಕೊಂಡು ಬಂದ್ರು: ಜಿಮಖಾನಾ ಕ್ಲಬ್ ಮೇಲೆ ರೇಡ್ ಏಕೆ ನಡೆದಿಲ್ಲ: ದೀಪಕ ಚಿಂಚೋರೆ

ಧಾರವಾಡ: ಜೂಜು ಅಡ್ಡೆ ಮೇಲೆ ದಾಳಿ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಎಐಸಿಸಿ ಸದಸ್ಯ ದೀಪಕ್ ಚಿಂಚೋರೆ ಪತ್ರಿಕಾಗೋಷ್ಠಿ ನಡೆಸಿ, ಬೇಕಂತಲೇ ಪೊಲೀಸರು ದೀಪಾವಳಿ ಹಬ್ಬಕ್ಕೆ ಅಡ್ಡಿಪಡಿಸಿದ್ದಾರೆ. ದೀಪಾವಳಿ ಹಿಂದೂಗಳ ದೊಡ್ಡ ಹಬ್ಬ ಎಂದು ಹೇಳಿದರು.
ಮಾತಾಡಿದ್ದೇನು ವೀಡಿಯೋ ಇಲ್ಲಿದೆ ನೋಡಿ..
ಅದೇ ದಿನ ಬೇರೆ ಕ್ಲಬ್ ಗಳಲ್ಲಿಯೂ ಜೂಜು ನಡೆದಿದ್ದವು. ನಗರದ ಜಿಮ್‌ಖಾನಾ ಕ್ಲಬ್ ನಲ್ಲಿ ಜೂಜಾಡಿದ್ದಾರೆ. ಬೇರೆ ಬೇರೆ ಕ್ಲಬ್ ಗಳಲ್ಲಿ ಜೂಜು ಆಡಲಾಗಿದೆ. ಪೊಲೀಸರು ದೊಡ್ಡವರ ಕ್ಲಬ್ ಬಿಟ್ಟಿದ್ದಾರೆ. ಬೇಕಂತಲೇ ಕೆಲವು ಕ್ಲಬ್ ಗಳನ್ನು ಟಾರ್ಗೆಟ್ ಮಾಡಲಾಗಿದೆ. ದೊಡ್ಡವರಿಗೊಂದು, ಸಣ್ಣವರಿಗೊಂದು ನ್ಯಾಯ. ಧಾರವಾಡವನ್ನಷ್ಟೇ ಏಕೆ ಟಾರ್ಗೆಟ್ ಮಾಡಲಾಗಿದೆ ಎಂದರು.
ಉತ್ತರ ವಲಯ ಐಜಿಪಿಗೆ ಬೇರೆ ಜಿಲ್ಲೆಗಳು ಕಾಣಲಿಲ್ಲವೇ. ಐಜಿಪಿ ರಾಘವೇಂದ್ರ ಸುಹಾಸ್ ಅವರಿಗೆ ಪ್ರಶ್ನಿಸಿದ ಚಿಂಚೋರೆ, ಇಂಥ ಪ್ರಕರಣದಲ್ಲಿ ಪೊಲೀಸ್ ಠಾಣೆಯಲ್ಲಿಯೇ ಬೇಲ್ ನೀಡಲಾಗುತ್ತೆ. ಆದರೆ, ಇಲ್ಲಿ ಬೇಕಂತಲೇ ತೊಂದರೆ ಕೊಡಲಾಗಿದೆ. ಕೆಲವರನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳಲಾಗಿದೆ. ವೃದ್ಧರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ. ಜಾಮೀನು ನೀಡಿದ ಬಳಿಕ ಮತ್ತೆ ಕರೆಸಿಕೊಳ್ಳಲಾಗಿದೆ. ಠಾಣೆಗೆ ಕರೆಸಿ ಮತ್ತೆ ವಿಚಾರಣೆ ಮಾಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.