ಮಾಡಿದ್ದುಣೋ ಮಾರಾಯಾ.. ಮಾಡಿದ್ದರಲ್ಲೀ ಪೋಸ್ ಯಾಕೆ ಗುರೂ..!

ಧಾರವಾಡ: ಇದು ಕಥೆಯಲ್ಲ ಜೀವನ. ಇಲ್ಲಿ ಹೋರಾಟ ಮಾಡಲು ಬರುವುದು ಮುಂದಿನ ಕೆಲವು ಚುನಾವಣೆಗಳನ್ನ ದೃಷ್ಟಿಯಲ್ಲಿಟ್ಟುಕೊಂಡು. ಹಾಗಾಗಿಯೇ ನಿಜವಾಗಿಯೂ ಹೋರಾಟ ಮಾಡುವವರಿಗೆ ಬೇಸರವಾಗತ್ತೆ. ಅದು ಇಂದು ಧಾರವಾಡದ ಬೀದಿಯಲ್ಲಿ ನಡೆದು ಹೋಯಿತು.
ಮೊದಲು ಈ ವೀಡಿಯೋ ನೋಡಿ ಬಿಡಿ.. ನಿಮಗೆ ಅರ್ಥ ಆಗಬಹುದು..
ಇಲ್ಲಿ ಅಡುಗೆ ಮಾಡಿದ್ದು ರೈತರು. ಹೋರಾಟಕ್ಕೆ ತಾಜಾತನ ಕೊಡಬೇಕೆಂಬ ಕಾರಣಕ್ಕೆ ಜ್ಯುಬಲಿ ವೃತ್ತದಲ್ಲಿಯೇ ಅಡುಗೆ ಮಾಡಲು ಮುಂದಾದರೂ, ಅಲ್ಲಿ ಆರಂಭವಾಗಿ ಅಡುಗೆ ಆಯಿತು ಅನ್ನೋ ಅಷ್ಟರಲ್ಲೇ, ಕೆಲವರು ಪಕ್ಷದ ಹೆಸರಿನಲ್ಲಿರುವ ಕ್ಯಾರೆಕ್ಟರಗಳು ಬಂದು ಪೋಟೋಗೆ ಫೋಸು ಕೊಡಲಾರಂಭಿಸಿದರು. ಅವರೆಲ್ಲರನ್ನೂ ತಪರಾಕಿ ಹಾಕಿ ಕಳಿಸಲಾಯಿತು.
ಕೆಲವರು ಕೆಸರಿನಲ್ಲಿ ಬಿದ್ದರೂ ಮೀಸೆ ಮಣ್ಣಾಗಿಲ್ಲ ಅನ್ನೋರು ಇರ್ತಾರೆ. ಅಂಥವರೇ ಹೀಗೆ ಮಾಡೋದು. ರೈತಪರ ಕಾಳಜಿ ತೋರಿಸೋಕೆ ಹಸಿರು ಟವೆಲ್ಲು, ಬೇರೆಯವರ ಹೋರಾಟದಲ್ಲಿ ನಾಲ್ಕೈದು ಪೋಟೋ. ಆಮೇಲೆ ಸೋಷಿಯಲ್ ಮೀಡಿಯಾದಲ್ಲಿ ಹಾಕಿ, ‘ಭಾರ್ರೀ ಮಾಡೇನ್ ನೋಡ್ಪೋ’ ಎನ್ನುತ್ತಲೇ ರಾಜಕಾರಣಿಗಳನ್ನ ಹಾಳು ಮಾಡುವ ಮನಸ್ಥಿತಿ. ಇದೇಲ್ಲ ಡ್ರಾಮಾ ಬೇಕಾ ಮಿಸ್ಟರ್.. (ಗಳೇ)