RTO ಕಚೇರಿ ಬಳಿ ಅಪಘಾತ: ಶಹರ ಠಾಣೆ ಪೊಲೀಸ್ ಕಾನ್ಸಟೇಬಲ್ ಗೆ ‘ಹೆಡ್ ಇಂಜೂರಿ’
1 min read
ಹುಬ್ಬಳ್ಳಿ: ಧಾರವಾಡದಿಂದ ಕರ್ತವ್ಯ ನಿರ್ವಹಿಸಿ ಮರಳಿ ಬರುತ್ತಿದ್ದ ಸಮಯದಲ್ಲಿ ಸಾರಿಗೆ ಇಲಾಖೆಯ ಕಚೇರಿ ಬಳಿ ಬೊಲೇರೋ ವಾಹನ ಡಿಕ್ಕಿಯಾದ ಪರಿಣಾಮ ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರೋರ್ವರಿಗೆ ತೀವ್ರವಾದ ಗಾಯಗಳಾದ ಘಟನೆ ನಡೆದಿದೆ.
ಕೋರ್ಟ್ ಸಮನ್ಸ ಡ್ಯೂಟಿ ಮಾಡುತ್ತಿದ್ದ ಆರ್.ಟಿ.ನಾಯಕ ಎಂಬುವವರಿಗೆ ತಲೆಗೆ ಪೆಟ್ಟು ಬಿದ್ದಿದ್ದು ಧಾರವಾಡದ ಸತ್ತೂರ ಬಳಿಯಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಶಹರ ಠಾಣೆಯಲ್ಲಿದ್ದ ನಾಯಕ ಅವರು ಬಂದೋಬಸ್ತ್ ಗಾಗಿ ಧಾರವಾಡಕ್ಕೆ ತೆರಳಿದ್ದರು.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ಸಂಚಾರಿ ಠಾಣೆಯಲ್ಲಿ ದಾಖಲಾಗಿದ್ದು, ಬೊಲೇರೋ ವಾಹನದ ಚಾಲಕನ ವಿಚಾರಣೆ ನಡೆದಿದೆ.