ಇನ್ಸಪೆಕ್ಟರ್ ಪ್ರಭು ಸೂರಿನ್ ಮತ್ತೊಂದು ರಾದ್ಧಾಂತ: ಕ್ರಮ ಜರುಗಿಸುವಂತೆ ವಕೀಲರ ಆಗ್ರಹ
1 min read
ಧಾರವಾಡ: ನವನಗರದ ನಿವಾಸಿಯಾಘಿರುವ ವಕೀಲರ ಸಂಘದ ಸದಸ್ಯರು ಆಗಿರುವ ನ್ಯಾಯವಾದಿಯ ಮೇಲೆ ಇನ್ಸಪೆಕ್ಟರ್ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಧಾರವಾಡದಲ್ಲಿಂದು ಪ್ರತಿಭಟನೆ ನಡೆಸಿದರು.
ನವನಗರ ಎಪಿಎಂಸಿ ಠಾಣೆಯ ಇನ್ಸಪೆಕ್ಟರ್ ಪ್ರಭು ಸೂರಿನ್, ವಕೀಲರ ಸಂಘದ ವಿನೋದ ಪಾಟೀಲರ ಮೇಲೆ ಕ್ರಮ ತೆಗೆದುಕೊಳ್ಳುವ ಸಮಯದಲ್ಲಿ ಮಾನವ ಹಕ್ಕನ್ನ ಉಲ್ಲಂಘನೆ ಮಾಡಿದ್ದಾರೆಂದು ವಕೀಲರು ದೂರಿದರು. ವಕೀಲರ ಮೇಲೆ ದಬ್ಬಾಳಿಕೆ ಮಾಡಿರುವ ಇನ್ಸಪೆಕ್ಟರ್ ಸೂರಿನ ಮೇಲೆ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ ವಕೀಲರ ಸಂಘದ ಪದಾಧಿಕಾರಿಗಳು, ಸೋಮವಾರದೊಳಗೆ ಕ್ರಮವನ್ನ ಜರುಗಿಸದೇ ಇದ್ದರೇ, ಮತ್ತೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಧಾರವಾಡ ಕೋರ್ಟನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಕೀಲರು, ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ, ಇನ್ಸಪೆಕ್ಟರ್ ವಿರುದ್ಧ ಕ್ರಮವನ್ನ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಈ ಸಮಯದಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್.ಗೋಡ್ಸೆ, ವಕೀಲರ ಜೊತೆ ನಡೆದುಕೊಳ್ಳುವಾಗ ಕಾನೂನು ಜ್ಞಾನವಿಲ್ಲದ ರೀತಿಯಲ್ಲಿ ನಡೆದುಕೊಳ್ಳಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ಹಲವರು ವಕೀಲರು ಭಾಗವಹಿಸಿ, ಇನ್ಸಪೆಕ್ಟರ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಇನ್ಸಪೆಕ್ಟರ್ ಸೂರಿನ್ ಬಗ್ಗೆ ಕೆಲ ದಿನಗಳ ಹಿಂದೆ ಬಂಗಾರದ ಲೂಟಿ ಮಾಡಿದ ಪ್ರಕರಣದಲ್ಲಿಯೂ ಹೆಸರು ಕೇಳಿ ಬಂದಿದ್ದನ್ನ ಇಲ್ಲಿ ಸ್ಮರಿಸಬಹುದು.