ಸರಕಾರಿ ಜಮೀನು ವಿವಾದ- ಪಿಡಿಓ ಸೇರಿ 9 ಜನರ ಬಂಧನ
1 min read
ಚಿಕ್ಕಮಗಳೂರು: ಸರಕಾರಿ ಜಮೀನು ವಿವಾದದ ಸಂಬಂಧವಾಗಿ ಪಿಡಿಓ ವಾಹನಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಓ ಸಮೇತ 9 ಜನರನ್ನ ಅಜ್ಜಂಪುರ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.
ಸರಕಾರಿ ಜಾಗೆಯನ್ನ ಕಬಳಿಕೆ ಮಾಡುವ ಸಂಬಂಧ ಗ್ರಾಮ ಪಂಚಾಯತಿ ಪಿಡಿಓ ವಾಹನವನ್ನ ತೆಗೆದುಕೊಂಡು ಜಮೀನು ಬಳಿ ಹೋಗಿ ಇನ್ನೊಂದು ಗುಂಪಿನೊಂದಿಗೆ ಕಾದಾಟ ನಡೆಸಿದ್ದರಿಂದ ಪಿಡಿಓ ವಾಹನಕ್ಕೆ ಬೆಂಕಿ ಹಚ್ಚಿದ್ದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡು ಗುಂಪಿನ ಒಟ್ಟು 9 ಜನರ ಬಂಧನ ಮಾಡಲಾಗಿದ್ದು, ಪಿಡಿಓ ಹನುಮಂತಪ್ಪ ಗುಂಪಿನ ಪಿಡಿಓ, ಆಂಜನಮ್ಮ, ತಿಪ್ಪೇಶಪ್ಪ, ಲಂಕೇಶ್, ವೆಂಕಟೇಶ, ರುದೇಶ್, ಶರಣ ಹಾಗೂ ಮತ್ತೊಂದು ಗುಂಪಿನ ಕಲ್ಲೇಶ್, ಪ್ರಶಾಂತ್ ಬಂಧನ ಮಾಡಲಾಗಿದೆ.
ಸರಕಾರಿ ಜಮೀನು ಕಬಳಿಕೆ ಸಂಬಂಧ ಕಲ್ಲೇಶ ಗುಂಪಿನ ಜೊತೆಗೆ ಪಿಡಿಓ ಗುಂಪು ಕಾದಾಟಕ್ಕೆ ಇಳಿದಿತ್ತು. ಈ ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಪೊಲೀಸರು ಬಿಗಿ ಪೊಲೀಸ್ ಕಾವಲು ಹಾಕಿದ್ದಾರೆ.