ಯುಪಿ ಮನೀಷಾ ಗ್ಯಾಂಗರೇಪ್: ಪಂಜಿನ ಮೆರವಣಿಗೆ ನಡೆಸಿದ ದಲಿತ ಒಕ್ಕೂಟ
ಧಾರವಾಡ: We stand for Manisha and Her family, ದಲಿತರು ಬರುವರು ದಾರಿ ಬಿಡಿ. ದಲಿತರ ಕೈಗೆ ರಾಜ್ಯ ಕೊಡಿ. ದಲಿತರನ್ನು ಸುಟ್ಟಬೆಂಕಿ ದೇಶವನ್ನೆ ಸುಡುವುದು ಎಂಬ ಘೋಷಣೆಗಳೊಂದಿಗೆ ಧಾರವಾಡ ಜಿಲ್ಲೆಯ ವಿವಿಧ ದಲಿತ ಸಂಘ-ಸಂಸ್ಥೆಗಳ ಒಕ್ಕೂಟ ಪಂಜಿನ ಮೆರವಣಿಗೆಯನ್ನ ನಡೆಸಿತು.
ಪಂಜಿನ ಮೆರವಣೆಗೆಯಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ರವರ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ದಲಿತ ಯುವತಿ ಮನೀಷಾ ವಾಲ್ಮೀಕಿಯ ಮೇಲೆ ನಡೆದ ಗ್ಯಾಂಗ ರೇಪ. ಆಕೆಯ ನಾಲಿಗೆ ಕತ್ತಿರಿಸಿ,ಬೆನ್ನು ಮೂಳೆಗಳನ್ನು ಮುರಿದು ಎಡ ಕೈ ಮುರಿದು ನಿರಂತರ ಎರಡು ದಿನ ಅತ್ಯಾಚಾರ ಮಾಡಿ ಆಕೆಗೆ ಸರಿಯಾದ ಆರೈಕೆ ಮಾಡದೆ. ದೂರು ಕೊಡಲು ಠಾಣೆಗೆ ಹೋದಾಗ ಆಕೆಯ ಪ್ರಕರಣ ದಾಖಲಿಸದ ಪೋಲಿಸರು, ಆಕೆಯ ಮರಣದ ಸಮಯದಲ್ಲಿ ಹೇಳಿಕೆಯಲ್ಲಿ ಅತ್ಯಾಚಾರಿಗಳ ಹೆಸರನ್ನುಹೆಸರಿಸಿ ಹೇಳಿದರು. ಪ್ರಕರಣ ಮುಚ್ಚಿ ಹಾಕಲುರಾತ್ರೋರಾತ್ರಿ ಆಕೆಯ ಹೆತ್ತವರಿಗೂ ಶವ ಕೊಡದೆ ಸುಟ್ಟು ಹಾಕಿ, ಹೆತ್ತವರನ್ನು ಗೃಹ ಬಂಧನದಲ್ಲಿರಿಸಿ ಯಾರನ್ನು ಸಾಂತ್ವನ ಹೇಳದಂತೆ ಮಾಡಿದ ಹೇಯ ಕೃತ್ಯವೆಂದು ಪ್ರಮುಖರು ಘಟನೆಯನ್ನ ಖಂಡಿಸಿದರು.
ಒಕ್ಕೂಟದ ಪ್ರಮುಖರಾದ ಎಂ.ಅರವಿಂದ, ಲಕ್ಷ್ಮಣ ಬಕ್ಕಾಯಿ ಸೇರಿದಂತೆ ಹಲವರು ಮಾತನಾಡಿ, ಉತ್ತರಪ್ರದೇಶ ಸರಕಾರದ ಅಮಾನವೀಯ ಘಟನೆಯನ್ನ ಖಂಡಿಸಿದರು.
ಡಾ.ಇಸಬೆಲ್ಲಾ ಝೇವಿಯರ, ದೀಪಾ ಗೌರಿ, ಲಕ್ಷ್ಮಣ ದೊಡ್ಡಮನಿ, ಬಸವರಾಜ ಆನೆಗುಂದಿ, ಡಾ ಪ್ರಕಾಶ, ಪರಮೇಶ್ವರ ಕಾಳೆ, ಪಿ.ಎಚ್.ನೀರಲಕೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.