Posts Slider

Karnataka Voice

Latest Kannada News

ಪಂಚಮಸಾಲಿಗೆ 2ಎ ಬೃಹತ್ ಪಾದಯಾತ್ರೆಯಲ್ಲಿ ಧಾರವಾಡದವರು ಭಾಗಿ..!

1 min read
Spread the love

ಧಾರವಾಡ: ಪಂಚಮಸಾಲಿ ಸಮಾಜವನ್ನ ರಾಜ್ಯ ಸರಕಾರ 2ಎ ಗೆ ಸೇರಿಸುವುದು ಮತ್ತು ಲಿಂಗಾಯತ ಸಮಾಜಗಳನ್ನ ಕೇಂದ್ರ ಸರಕಾರ ಓಬಿಸಿಗೆ ಸೇರಿಸುವಂತೆ ಆಗ್ರಹಿಸಿ ನಾಳೆಯಿಂದ ಕೂಡಲಸಂಗಮದಿಂದ ಬೃಹತ್ ಪಾದಯಾತ್ರೆ ಆರಂಭವಾಗಲಿದ್ದು, ಈ ಪಾದಯಾತ್ರೆಯಲ್ಲಿ ಭಾಗವಹಿಸಲು ಧಾರವಾಡದಿಂದಲೂ ಸಮಾಜದ ಮುಖಂಡರು ಹೊರಟು ನಿಂತಿದ್ದಾರೆ.

ಧಾರವಾಡ ತಾಲೂಕು ಲಿಂಗಾಯತ ಪಂಚಮಸಾಲಿ ಸಮಾಜ ಹಾಗೂ ಧಾರವಾಡದ ವೀರಮಾತೆ ಕಿತ್ತೂರ ರಾಣಿ ಚೆನ್ನಮ್ಮಾಜೀಯವರ ಅಭಿಮಾನಿ ಬಳಗದ ಪದಾಧಿಕಾರಿಗಳು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದು, ಸಮಾಜದ ಮುಖಂಡ ಸಿದ್ದಣ್ಣ ಸಪ್ಪೂರಿ ಎಲ್ಲರನ್ನೂ ಆಹ್ವಾನ ಮಾಡಿದ್ದಾರೆ.

ಕೂಡಲಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿರುವ ಪಾದಯಾತ್ರೆಯಲ್ಲಿ ಸಾವಿರಾರೂ ಜನರು ಭಾಗವಹಿಸಲಿದ್ದು, ನಾಳೆ ಕೂಡಲಸಂಗಮದಿಂದ ಹೊರಟು ಹುನಗುಂದ ಪಟ್ಟಣದಲ್ಲಿ ವಾಸ್ತವ್ಯ ನಡೆಯಲಿದೆ.

ಪಾದಯಾತ್ರೆಯು ಜನೇವರಿ 31ಕ್ಕೆ ಬೆಂಗಳೂರು ತಲುಪಲಿದ್ದು, ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲವೆಂದು ಮುಖಂಡರು ಹೇಳಿದ್ದಾರೆ.


Spread the love

Leave a Reply

Your email address will not be published. Required fields are marked *