ನುಗ್ಲಿ ತವರು ಜಿಲ್ಲೆಯಲ್ಲೇ ಷಡಕ್ಷರಿ ಬಳಗ ಅವಿರೋಧ ಆಯ್ಕೆ
1 min read
ವಿಜಯಪುರ: ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿಯವರ ಜೊತೆ ಗುರುತಿಸಿಕೊಂಡಿರುವ ವಿಜಯಪುರ ಜಿಲ್ಲೆಯ ನಗರ ಘಟಕದ ಶಿಕ್ಷಕ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಚಂದ್ರಶೇಖರ್ ನುಗ್ಲಿಯವರ ತವರು ಜಿಲ್ಲೆಯಲ್ಲೇ ಇಂತಹ ಸ್ಥಿತಿ ಬಂದಿರುವುದು, ನುಗ್ಲಿಯವರಿಗೆ ಮುಖಭಂಗವಾದಂತಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ವಿಜಯಪುರ ಜಿಲ್ಲೆಯ ನಗರ ಘಟಕದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಚುನಾವಣೆ ಷಡಾಕ್ಷರಿ ಅಭಿಮಾನಿ ಬಳಗದ ಸುರೇಶ ಶಡಶ್ಯಾಳ ಹಾಗೂ ಜುಬೇರ ಕೆರೂರ ನೇತೃತ್ವದ ತಂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 13 ಸ್ಥಾನಗಳಲ್ಲಿ 9 ಪುರುಷ ಹಾಗೂ 4 ಮಹಿಳಾ ಸ್ಥಾನಗಳಿದ್ದು, ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮೊದಲಿನ ತಂಡಗಳಿಗೆ ಹಿನ್ನೆಡೆಯಾಗಿದ್ದು, ಅವಿರೋಧವಾಗಿ ಆಯ್ಕೆಯಾದ 13 ಶಿಕ್ಷಕರಲ್ಲಿ ಮೂವರು ಉರ್ದು ಶಾಲೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.