ತಿಳಿದವರ ಸಭೆಯಲ್ಲಿ ಕಾನೂನು ಉಲ್ಲಂಘನೆ: ನೌಕರರ ಸಂಘದ ಕಾರ್ಯಕ್ರಮದಲ್ಲಿ ನಡೆಯುತ್ತಿರುವುದೇನು..?
1 min read
ವಿಜಯಪುರ: ರಾಷ್ಟ್ರದಲ್ಲಿ ಕೋವಿಡ್-19 ಮುಂಜಾಗೃತಾ ಕ್ರಮಗಳನ್ನ ಪಾಲನೆ ಮಾಡಬೇಕೆಂದು ಸರಕಾರ ಆದೇಶಗಳನ್ನ ಹೊರಡಿಸುತ್ತದೆ. ಸಾಮಾನ್ಯ ಜನರು ಕಾನೂನು ಉಲ್ಲಂಘನೆ ಮಾಡಿದಾಗ, ಅವರನ್ನ ಎಲ್ಲರೂ ದೂಷಿಸುತ್ತಾರೆ, ಕೂಡಾ. ಆದರೆ, ಸರಕಾರದ ಸಂಬಳವನ್ನ ಪಡೆಯುವ ನೌಕರರೂ ಸರಕಾರದ ಆದೇಶವನ್ನ ಪಾಲನೆ ಮಾಡದಿರುವುದು ಸೋಜಿಗ ಮೂಡಿಸುತ್ತಿದೆ.
ಸರಕಾರಿ ನೌಕರರ ಸಂಘದ ಕಾರ್ಯಕ್ರಮ ನಗರದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಪರವಾನಿಗೆ ನೀಡಿದ ಮಹಾನಗರ ಪಾಲಿಕೆ ಯಾವ ಮಾನದಂಡದ ಮೇಲೆ ನೀಡಿದೆಯೋ ಗೊತ್ತಿಲ್ಲ. ಯಾಕಂದರೇ, ಕೋವಿಡ್-19 ಗೆ ತೆಗೆದುಕೊಳ್ಳಬೇಕಾದ ಯಾವೊಂದು ನಿಮಯಗಳು ಇಲ್ಲಿ ಕಾಣುತ್ತಿರಲಿಲ್ಲ. ವೇದಿಕೆಯಲ್ಲೇ ನೂರಾರೂ ಜನರು ಕೂತಿದ್ದರು.
ಕಾರ್ಯಕ್ರಮದ ವೇದಿಕೆಯಲ್ಲಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಸೇರಿದಂತೆ ಹಲವರು ಕೂತಿದ್ದರೇ, ಕೆಳಗಡೆ 60 ವಯಸ್ಸಿಗೆ ಮೀರಿದವರು ಕೂತಿದ್ದು ಕಂಡು ಬಂತು. ಶೇಕಡಾ 50ರಷ್ಟು ಜನರು ಮಾಸ್ಕಗಳನ್ನ ಹಾಕಿಕೊಂಡಿರಲೇ ಇಲ್ಲ. ಸೋಷಿಯಲ್ ಡಿಸ್ಟನ್ಸ್ ಬಗ್ಗೆ ಮಾತನಾಡುವುದು ಬೇಡವೇ ಬೇಡ ಬಿಡಿ.
ಇವರು ಸರಕಾರಿ ನೌಕರರು. ಸರಕಾರದ ಕೆಲಸ ದೇವರ ಕೆಲಸ ಕೆಲಸ ಎಂದು ಕಚೇರಿ ಮುಂದೆ ಬರೆಸಿಕೊಳ್ಳುವವರು. ಸರಕಾರದ ಆದೇಶಗಳನ್ನ ಮಾತ್ರ ಪಾಲಿಸುವುದಿಲ್ಲವೆಂದು ಅಂದುಕೊಂಡಿದ್ದಾರೆ. ಹಾಗಾಗಿಯೇ ಇವರನ್ನ ಯಾವ ಥರದ ಪ್ರಜ್ಞಾವಂತರು ಎನ್ನಬೇಕು ಎಂಬುದು ಯಕ್ಷಪ್ರಶ್ನೆಯಾಗಿದೆ.