ಪತ್ನಿ ಬಲಿ ಪಡೆದ “ನೂಲ್ವಿ ಹಂಪ್ಸ್”- ಬದುಕುಳಿದ ಪತಿ
1 min read
ಹುಬ್ಬಳ್ಳಿ: ದಂಪತಿಗಳಿಬ್ಬರು ಬೈಕಿನಲ್ಲಿ ಹುಬ್ಬಳ್ಳಿ ತಾಲೂಕಿನ ಶೆರೇವಾಡದಿಂದ ನಗರಕ್ಕೆ ಬರುತ್ತಿದ್ದ ವೇಳೆಯಲ್ಲಿ ಹಂಪ್ಸ್ ಬಂದಾಗ ಬೈಕಿನಿಂದ ಮಹಿಳೆಯೋರ್ವಳು ಕೆಳಗೆ ಬಿದ್ದು ಸಾವಿಗೀಡಾದ ಘಟನೆ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಬಳಿ ಸಂಭವಿಸಿದೆ.
ವೇಗವಾಗಿ ಬೈಕ್ ಚಲಾಯಿಸುತ್ತಿದ್ದ ಸಿದ್ದಪ್ಪ ಶೆರೇವಾಡ ಹಂಪ್ಸ್ ಬಂದ ತಕ್ಷಣವೇ ಬ್ರೇಕ್ ಹಾಕಿದ್ದಾನೆ. ಹೀಗಾಗಿ ಹಿಂದೆ ಕೂತಿದ್ದ 31 ವಯಸ್ಸಿನ ರೂಪಾ, ಕೆಳಗೆ ಬಿದ್ದು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ನೂಲ್ವಿ ಬಳಿಯ ದನದ ಮಾರುಕಟ್ಟೆ ಬಳಿ ಹೊಸದಾಗಿ ರೋಡ್ ಹಂಪ್ಸ್ ಹಾಕಲಾಗಿದ್ದು, ಇದೇ ಘಟನೆಗೆ ಕಾರಣವೆಂದು ಹೇಳಲಾಗಿದೆ.
ಮೃತಪಟ್ಟ ಮಹಿಳೆಯ ಶವದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಪ್ರಕರಣ ಬಗ್ಗೆ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.