ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಬೈಕ್ ಹಚ್ಚಿ ಕೆಲಸಕ್ಕೆ ಹೋಗ್ತೀರಾ..! ಹಾಗಿದ್ರೇ ನಿಮ್ಮ ಬೈಕಿಗೆ ಅದ್ಯಾವಾಗ ಬೆಂಕಿ ಬೀಳತ್ತೋ..!
ಹುಬ್ಬಳ್ಳಿ: ನಗರದ ಹೊಸ್ ಬಸ್ ನಿಲ್ದಾಣದಲ್ಲಿ ದಿನವೂ ನೂರಾರೂ ಪ್ರಯಾಣಿಕರು ಬೇರೆ ಪ್ರದೇಶಗಳಿಗೆ ಹೋಗಲು ಮನೆಯಿಂದ ಬೈಕ್ ತಂದು, ಅದನ್ನ ಹೊಸ್ ಬಸ್ ನಿಲ್ದಾಣದಲ್ಲಿಟ್ಟು ಹೋಗುವುದು ವಾಡಿಕೆ. ಆದರೆ, ಹೋಗಿ ಬರುವುದರೊಳಗೆ ಆ ಬೈಕುಗಳು ಏನಾಗಬಹುದೆಂಬ ಕಲ್ಪನೆಯೂ ಇಲ್ಲದೇ ಬೈಕ್ ಮಾಲೀಕರು ನಡೆದುಕೊಳ್ಳುತ್ತಿರುವುದು ಸೋಜಿಗವೆನಿಸುತ್ತಿದೆ.
ಹೌದು.. ಹೊಸ್ ಬಸ್ ನಿಲ್ದಾಣದ ಬೈಕ್ ಸ್ಟ್ಯಾಂಡಿನಲ್ಲಿ ನಿಲ್ಲಿಸಿ ಪರಸ್ಥಳಗಳಿಗೆ ಹೋಗಿ ಬರುವುದರೊಳಗೆ ನಿಮ್ಮ ಬೈಕ್ ಗಳು ಒಂದಿಲ್ಲಾ ಒಂದು ದಿನ ಸುಟ್ಟು ಕರಕಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಯಾಕಂದ್ರೇ, ನೀವೂ ನಿಲ್ಲಿಸಿ ಹೋದ ಸ್ಥಳದಲ್ಲಿ ಗುತ್ತಿಗೆದಾರ ವಿದ್ಯುತ್ ನಿಂದ ನೀರನ್ನ ಕಾಯಿಸಿಕೊಳ್ಳುತ್ತಾನೆ.. ಇಷ್ಟು ಸಣ್ಣ ವಿಷಯಕ್ಕೆ ಹೀಗೇಲ್ಲಾ ಯಾಕೆ ವಿಚಾರ ಮಾಡಬೇಕು ಅಂದುಕೋ ಬೇಡಿ.
ಹೀಟರ್ ಕ್ವಾಯಿಲ್ ಹಾಗೇಯೇ ಬಿಡಲಾಗತ್ತೆ. ಆಕಸ್ಮಿಕವಾಗಿ ಅದು ಬೈಕಗಳಿಗೆ ತಗುಲಿ ಬೆಂಕಿ ಹತ್ತಿದ್ರೇ ನಿಮ್ಮ ಬೈಕುಗಳ ಸ್ಥಿತಿ ಏನಾಗಬೇಡ ವಿಚಾರ ಮಾಡಿ. ಯಾಕಂದ್ರೇ, ದುಡಿದು ಗಳಿಸಿದ್ದು ಕಳೆದುಕೊಂಡಾಗ ಆಗುವ ನೋವು ಎಷ್ಟು ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರವೇ.
ಇನ್ನೂ ಮುಂದಾದರೂ ಬೈಕ್ ನಿಲ್ಲಿಸಿ ಹೋಗುವ ಮುನ್ನ ನಿಮ್ಮ ಬೈಕ್ ಗಳು ಎಷ್ಟೊಂದು ಸೇಫ್ ಆಗಿವೆ ಎಂಬುದನ್ನ ತಿಳಿದುಕೊಂಡು ಬಿಟ್ಟು ಹೋಗಿ.