ನವಲಗುಂದ ತಹಶೀಲ್ದಾರ ಕಚೇರಿಯಲ್ಲಿ ಸಕಾಲ ಸಪ್ತಾಹ
1 min read
ಧಾರವಾಡ: ಸಾರ್ವಜನಿಕರಿಗೆ ಅನುಕೂಲವಾಗುವ ಯೋಜನೆಗಳನ್ನ ಪಡೆಯಲು ಬೇಕಾಗುವ ಆಧಾರಗಳನ್ನ ಪಡೆಯುವ ಸಕಾಲ ಯೋಜನೆಯ ಸಪ್ತಾಹವನ್ನ ಇಂದಿನಿಂದ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಆರಂಭಿಸಲಾಗಿದೆ.
ತಹಶೀಲ್ದಾರ ಕಚೇರಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವ ನಾಮಫಲಕವನ್ನ ಹಾಕಲಾಗಿದ್ದು, ಯಾವ ಯಾವ ಡಾಕುಮೆಂಟುಗಳು ಎಷ್ಟು ದಿನದಲ್ಲಿ ಸಿಗುತ್ತವೆ ಎಂಬುದನ್ನ ವಿವರವಾಗಿ ತಿಳಿಸಲಾಗಿದೆ. ಈ ಮಾಹಿತಿ ಆಧರಿಸಿ, ಜನರು ಪ್ರಯೋಜನ ಪಡೆಯಬಹುದಾಗಿದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಹಶೀಲ್ದಾರ ನವೀನ ಹುಲ್ಲೂರ, ಸಾರ್ವಜನಿಕರಿಗೆ ಅನುಕೂಲವಾಗುವ ಸಪ್ತಾಹದ ಯೋಜನೆಯನ್ನ ಪಡೆದುಕೊಳ್ಳಬೇಕು. ಯಾವುದೇ ತೊಂದರೆಯಾದರೂ, ನೇರವಾಗಿ ನನ್ನ ಗಮನಕ್ಕೆ ತಂದು ಕೆಲಸ ಮಾಡಿಕೊಳ್ಳಬೇಕೆಂದು ಜನರಿಗೆ ಮನವಿ ಮಾಡಿಕೊಂಡರು.
ತಾಲೂಕಿನ ಪ್ರತಿ ಗ್ರಾಮಸ್ಥರು ಸಕಾಲದ ಪ್ರಯೋಜನ ಪಡೆಯಲು ತಾಲೂಕು ಆಡಳಿತ ಕೋರಿದ್ದು, ಜನತೆ ಪ್ರಯೋಜನ ಪಡೆಯಬೇಕಾಗಿದೆ.