ನವಲಗುಂದ ಗುಡ್ಡದಕೇರಿಯಲ್ಲಿ ಟಿಪ್ಪು ಜಯಂತಿ
1 min read
ಧಾರವಾಡ: ಜಿಲ್ಲೆಯ ನವಲಗುಂದ ಪಟ್ಟಣದ ಗುಡ್ಡದಕೇರಿ ಓಣಿಯಲ್ಲಿ ಶೇರ್-ಎ-ಮೈಸೂರು ಖ್ಯಾತಿಯ ಟಿಪ್ಪು ಸುಲ್ತಾನ ಜಯಂತಿಯನ್ನ ವಿನಮ್ರತೆಯಿಂದ ಆಚರಣೆ ಮಾಡಲಾಯಿತು.
ಗುಡ್ಡದಕೇರಿಯ ಹಿರಿಯರು ಹಾಗೂ ಮಕ್ಕಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಸಿಹಿಯನ್ನ ಹಂಚುವ ಮೂಲಕ ವೀರ ಸುಲ್ತಾನರ ಸ್ಮರಣೆಯನ್ನ ಮಾಡಲಾಯಿತು.
ಬ್ರಿಟಿಷರ್ ವಿರುದ್ಧ ಹೋರಾಡಿದ ಮಹಾನ್ ವ್ಯಕ್ತಿಯ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ನಾಡು-ನುಡಿಗಾಗಿ ಓರ್ವ ವ್ಯಕ್ತಿ ಹೇಗೆ ಸುಲ್ತಾನ್ ಆಗಿ ಹೊರಹೊಮ್ಮುತ್ತಾನೆ ಎಂಬುದನ್ನ ಅರಿಯುವ ಅಗತ್ಯತೆ ಇಂದಿನ ದಿನಮಾನದಲ್ಲಿ ಅವಶ್ಯಕವಾಗಿದೆ ಎಂದು ನೆರೆದ ಪ್ರಮುಖರು ಹೇಳಿದರು.
ಟಿಪ್ಪು ಸುಲ್ತಾನ ಬ್ರಿಟಿಷರ್ ವಿರುದ್ಧ ಹೋರಾಡುವಾಗ ಯಾವುದೇ ಮತಾಂಧೆಯಲ್ಲಿ ಮುಳುಗಿ ಹಾಗೇ ಮಾಡಿರಲಿಲ್ಲ. ಬದಲಿಗೆ ಮೈಸೂರು ರಾಜ್ಯವನ್ನ ಉಳಿಸಲು ನಡೆಸಿದ ಹೋರಾಟ ಅಪ್ರತಿಮ ಎಂಬುದನ್ನ ಮಕ್ಕಳಿಗೆ ಪ್ರತಿಯೊಬ್ಬರು ಮನೆ ಮನೆಯಲ್ಲಿ ತಿಳಿಸುವ ಮೂಲಕ ಈ ದಿನವನ್ನ ಮತ್ತಷ್ಟು ಪ್ರೀತಿಯಿಂದ ಹೆಚ್ಚಿಸಬೇಕೆಂದು ಕೇಳಿಕೊಂಡರು.