ನವಲಗುಂದ ಬಳಿ ಆಟೋ ಪಲ್ಟಿ: ಹತ್ತಕ್ಕೂ ಹೆಚ್ಚು ಜನರಿಗೆ ಗಾಯ
1 min read
ಧಾರವಾಡ: ಜಿಲ್ಲೆಯ ನವಲಗುಂದ ಬಳಿ ಆಟೋವೊಂದು ಪಲ್ಟಿಯಾಗಿ ಮುಳ್ಳಿನ ಕಂಟಿಗಳಲ್ಲಿ ಬಿದ್ದ ಪರಿಣಾಮ ಮಹಿಳೆಯರು, ಮಕ್ಕಳು ಸೇರಿದಂತೆ ಹತ್ತಕ್ಕೂ ಹೆಚ್ಚು ಜನರಿಗೆ ಗಾಯಗಳಾದ ಘಟನೆ ಕೆಲವೇ ನಿಮಿಷಗಳ ಹಿಂದೆ ನವಲಗುಂದ ಪಟ್ಟಣದ ಹೊರವಲಯದಲ್ಲಿರುವ ನರಗುಂದ ಕ್ರಾಸನಲ್ಲಿ ಸಂಭವಿಸಿದೆ.
ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಹಲವರು ನವಲಗುಂದ ತಾಲೂಕಿನ ಆರೇ ಕುರಹಟ್ಟಿ ಗ್ರಾಮಕ್ಕೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರು. ಇಳಿಸಂಜೆ ಕಾರ್ಯಕ್ರಮ ಮುಗಿದ್ದರಿಂದ ಮರಳಿ ತಮ್ಮೂರಿನತ್ತ ಪ್ರಯಾಣ ಬೆಳೆಸುತ್ತಿದ್ದರು.
ನವಲಗುಂದ ಪಟ್ಟಣದ ಹೊರವಲಯದಲ್ಲಿ ನರಗುಂದನತ್ತ ಆಟೋ ತಿರುಗಿಸಿದಾಗ, ಸಡನ್ನಾಗಿ ಹೋಗಿ ತೆಗ್ಗಿಗೆ ಬಿದ್ದಿದೆ. ತೆಗ್ಗಿನಲ್ಲಿ ಮುಳ್ಳಿನ ಕಂಟಿಗಳು ಇದ್ದಿದ್ದರಿಂದ ಮಕ್ಕಳು, ಮಹಿಳೆಯರು ಚೀರಾಟ ನಡೆಸುತ್ತಿದ್ದರು. ತಕ್ಷಣವೇ ದಾರಿ ಹೋಕನೋರ್ವ ತಕ್ಷಣವೇ, ಮಕ್ಕಳನ್ನ ಹೊರ ತೆಗೆದು, ಪೊಲೀಸರಿಗೆ ಮಾಹಿತಿ ನೀಡಿದ್ರು.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಂಬ್ಯುಲೆನ್ಸ್ ಸಹಿತ ಆಗಮಿಸಿದ ಪಿಎಸೈ ಜಯಪಾಲ ಪಾಟೀಲ, ಎಲ್ಲ ಗಾಯಾಳುಗಳನ್ನ ನವಲಗುಂದ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಮೊಹ್ಮದ ಎಂಬ ವ್ಯಕ್ತಿಗೆ ತೀವ್ರವಾಗಿ ಗಾಯಗೊಂಡಿದ್ದು, ಬಹುತೇಕ ಮಕ್ಕಳಿಗೆ ಮುಳ್ಳುಗಳು ನಟ್ಟಿದ್ದು, ರಸ್ತೆಯಲ್ಲಿ ಮಕ್ಕಳು ಕಣ್ಣೀರು ಹಾಕುತ್ತಿದ್ದರು.