Posts Slider

Karnataka Voice

Latest Kannada News

ನಮೋಶಿ-ಸಂಕನೂರರಿಗೆ ಅಭಿನಂದನೆ ತಿಳಿಸಿದ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯ ಘಟಕ

1 min read
Spread the love

ಧಾರವಾಡ: ನೂತನವಾಗಿ ಶಿಕ್ಷಕರ ಈಶಾನ್ಯ ಮತಕ್ಷೇತ್ರದಿಂದ ಆಯ್ಕೆಗೊಂಡ ಶಶೀಲ ನಮೋಶಿ ಹಾಗೂ ಪಶ್ಚಿಮ ಪದವೀಧರ ಕ್ಷೇತ್ರದಿಂದ ಆಯ್ಕೆಯಾದ ಎಸ್.ವಿ.ಸಂಕನೂರ ಅವರಿಗೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಭಿನಂದನೆ ತಿಳಿಸಿದೆ.

ಸಂಘಟನಾ ಚತುರರಾಗಿರುವ ಶಶೀಲ ನಮೋಶಿಯವರ ಆಯ್ಕೆಯನ್ನ ಸ್ವಾಗತಿಸಿರುವ ಸಂಘದ ರಾಜ್ಯ ಹಾಗೂ ಕಲಬುರಗಿ ಜಿಲ್ಲಾ ಘಟಕ, ನಮೋಶಿಯವರಿಂದ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ದೊರಕಲಿದ್ದು, ಇವರ ಗೆಲುವಿನಿಂದ ಶಿಕ್ಷಕರಿಗೂ ಸ್ಪೂರ್ತಿ ಬಂದಿದೆ ಎಂದು ಆಶಾಭಾವನೆಯನ್ನ ಸಂಘದ ರಾಜ್ಯ ಘಟಕ ಹೊಂದಿದೆ.

ಪಶ್ಚಿಮ ಪದವೀಧರ ಕ್ಷೇತ್ರದಿಂದ ಜಯ ಗಳಿಸಿರುವ ಎಸ್.ವಿ.ಸಂಕನೂರ ಅವರಿಗೂ ಅಭಿನಂದನೆ ತಿಳಿಸಿರುವ ಕರ್ನಾಟಕ  ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಸೇರಿದಂತೆ ಸಂಘದ ಪದಾಧಿಕಾರಿಗಳು ಸಂಕನೂರ ಅವರಿಗೆ ಶುಭಾಶಯ ಕೋರಿದ್ದಾರೆ.

 

ಎರಡನೇಯ ಬಾರಿಗೆ ಗೆಲುವು ಕಂಡಿರುವ ಸಂಕನೂರ ಅವರು, ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಭರವಸೆಯನ್ನ ಸಂಘ ಹೊಂದಿದೆ.

ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ

ಎರಡನೇ ಬಾರಿ ಗೆಲುವಿನ ನಗೆ ಬೀರಿದ ಎಸ್ ವಿ ಸಂಕನೂರ

ವಿಧಾನ ಪರಿಷತ್ ನ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್ ವಿ ಸಂಕನೂರ ಅವರು ಜಯಶಾಲಿಯಾಗಿದ್ದಾರೆ.
ಎಸ್ ವಿ ಸಂಕನೂರ ಅವರು 23,857 ಪ್ರಥಮ‌ ಪ್ರಾಶಸ್ತ್ಯದ ಮತಗಳನ್ನು ಪಡೆಯುವ ಮೂಲಕ ವಿಧಾನ ಪರಿಷತ್ ಗೆ ಎರಡನೇ ಬಾರಿಗೆ ಆಯ್ಕೆಯಾದರು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ನಡೆಯಿತು. ಒಟ್ಟು ನಾಲ್ಕು ಸುತ್ತಿನ ಮತ ಎಣಿಕೆ ನಡೆಯಿತು. ನಾಲ್ಕೂ ಸುತ್ತುಗಳಲ್ಲಿಯೂ ಎಸ್ ವಿ ಸಂಕನೂರ ಅವರು ಮುನ್ನಡೆ ಕಾಯ್ದುಕೊಂಡು ಜಯಶಾಲಿಯಾದರು.
ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಆರ್ ಎಂ ಕುಬೇರಪ್ಪ ಅವರು 12448 ರಷ್ಟು ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದು ಮುಗ್ಗರಿಸಿದರು. ಇನ್ನು ತೀವ್ರ ಸ್ಪರ್ಧೆ ಒಡ್ಡಿದ್ದ ಪಕ್ಷೇತರ ಅಭ್ಯರ್ಥಿ ಬಿಜೆಪಿ ಕಾಂಗ್ರೆಸ್ ಮಣಿಸಲು ವಿಫಲರಾದರೂ 6188 ರಷ್ಟು ಪ್ರಥಮ ಪ್ರಾಶಸ್ತ್ಯದ ಮತ ಪಡೆದು ಗಮನ ಸೆಳೆದರು. ಚುನಾವಣೆ ಕಣದಲ್ಲಿ ಒಟ್ಟು 11 ಅಭ್ಯರ್ಥಿಗಳು ಇದ್ದರು.
ನಾಲ್ಕನೇ ಹಾಗೂ ಕೊನೆಯ ಸುತ್ತಿ‌ನ ಮತ ಎಣಿಕೆ ಮುಗಿದ ನಂತರ ಪ್ರಾದೇಶಿಕ ಆಯುಕ್ತ ಹಾಗೂ ಚುನಾವಣೆ ಅಧಿಕಾರಿ ಆದಿತ್ಯ ಆಮ್ಲನ್ ಬಿಸ್ವಾಸ್ ಅವರು ಸಂಕನೂರ ಜಯವನ್ನು ಅಧಿಕೃತವಾಗಿ ಘೋಷಿಸಿದರು. ಪಶ್ಚಿಮ ಪದವೀಧರರ ಕ್ಷೇತ್ರ ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿದೆ.

…..
52041- ಒಟ್ಟು ಮತಗಳು
43269- ಸಿಂಧುಗೊಂಡ ಮತಗಳು
8772-  ಅಸಿಂಧು  ಮತಗಳು
ಒಟ್ಟು ಮತದಾರರು 75,067

ಪಡೆದ‌ ಮತಗಳು
ಎಸ್ ವಿ ಸಂಕನೂರ ಬಿಜೆಪಿ- 23,857
ಆರ್ ಎಂ ಕುಬೇರಪ್ಪ ಕಾಂಗ್ರೆಸ್- 12448
ಬಸವರಾಜ ಗುರಿಕಾರ ಪಕ್ಷೇತರ- 6188


Spread the love

Leave a Reply

Your email address will not be published. Required fields are marked *