Karnataka Voice

Latest Kannada News

ಗೃಹ ಸಚಿವರ ಜಿಲ್ಲೆಯಲ್ಲಿ ಗದ್ದುಗೆ ಗುದ್ದಾಟ- ಮ್ಯಾಜಿಕ್ ನಂಬರಗಾಗಿ ಬಿಜೆಪಿ ಹರಸಾಹಸ

1 min read
Spread the love

ಹಾವೇರಿ: ನಗರಸಭೆ ಗದ್ದುಗೆಯ ಪೈಟ್ ತೀವ್ರ ಕುತೂಹಲ ಕೆರಳಿಸಿದ್ದು, ಇಂದು ಕೆಲವೇ ನಿಮಿಷಗಳಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ.

31 ಸದಸ್ಯ ಬಲ ಹೊಂದಿರುವ ಹಾವೇರಿ ನಗರಸಭೆ. 15-ಕಾಂಗ್ರೆಸ್,  ಬಿಜೆಪಿ-9 ಹಾಗೂ 7 ಜನ ಪಕ್ಷೇತರರು ಸೇರಿ 31 ಸದಸ್ಯರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಗೆ ದಕ್ಕಲಿರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ತಪ್ಪಿಸಲು ಬಿಜೆಪಿ ರಣತಂತ್ರ ಹೆಣದಿದ್ದು, ಕೈ ಹಿಡಿದ ಪಕ್ಷೇತರರನ್ನು ಕಟ್ಟಿಹಾಕಲು ಬಿಜೆಪಿ ರಣತಂತ್ರ ರೂಪಸಿದೆ.

ಬಿಜೆಪಿಯ ರಾಜಕೀಯ ತಂತ್ರಕ್ಕೆ ಕಾಂಗ್ರೆಸ್ ಸದಸ್ಯರು ಪ್ರತಿಕ್ರಿಯೆ ಕೊಡದೇ ಸುಮ್ಮನಿದ್ದ ಸಮಯದಲ್ಲಿ, ಮನೆ ಜಾಗದ ವಿಚಾರದಲ್ಲಿ ಮೂವರು ನಗರಸಭೆ ಸದಸ್ಯರ ಮೇಲೆ ದೂರು ದಾಖಲಾಗಿದೆ. ಹಾವೇರಿ ನಗರಸಭೆ 3 ಸದಸ್ಯರು ಸೇರಿ ಆರು ಜನರ ಮೇಲೆ FIR ಆಗಿದ್ದು, ಹೊಡೆದು ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ ಆರೋಪ ಹೊರಿಸಲಾಗಿದೆ.

ಹಾವೇರಿ ಪುರಸಬೆಯಿಂದ ಬಿಡುಗಡೆಯಾಗಿದ್ದ ಪ್ಲಾಟ್ ಸಂಬಂಧ ಜಗಳ  ನಡೆದಿತ್ತು. ಈ‌ ಸಂಬಂಧ ಹಾವೇರಿ ನಗರ ಠಾಣೆಯಲ್ಲಿ ವೃದ್ಧೆಯೋರ್ವಳು ದೂರು ದಾಖಲಿಸಿದ್ದರು.

ಈ ಕಾರಣಕ್ಕಾಗಿ ಮೂವರು ಸದಸ್ಯರು ತಲೆಮರೆಸಿಕೊಂಡಿದ್ದು, ಮತದಾನ ಮಾಡಲು ನಗರಸಭೆಗೆ  ಆಗಮಿಸುವ ಸಂಧರ್ಭದಲ್ಲಿ ಮೂವರು ಸದಸ್ಯರನ್ನು ಬಂಧನ ಮಾಡುವ ಸಾಧ್ಯತೆಯಿದೆ. ಹೀಗಾಗಿ ನಗರಸಭೆ ಸುತ್ತಲೂ ಜಿಲ್ಲಾಡಳಿತ 144 ಸೆಕ್ಷನ್ ಜಾರಿ ಮಾಡಿದೆ.


Spread the love

Leave a Reply

Your email address will not be published. Required fields are marked *