ಅಂದರ್-ಬಾಹರ್ ಕೊಲೆ..?: ಚೆನ್ನಾಪುರ ರಸ್ತೆಯಲ್ಲಿ ಬೀದಿ ಹೆಣವಾದ ಊರಳಿಯ- ಹುಬ್ಬಳ್ಳಿ ಪೊಲೀಸರು ಸ್ಥಳಕ್ಕೆ ದೌಡು..
1 min read
ಹುಬ್ಬಳ್ಳಿ: ತಾಲೂಕಿನ ಅಂಚಟಗೇರಿ ಗ್ರಾಮದಲ್ಲಿ ಗೃಹಸ್ಥನೋರ್ವನನ್ನ ಬರ್ಭರವಾಗಿ ಕೊಲೆ ಮಾಡಲಾಗಿದ್ದು, ಕೊಲೆ ಮಾಡಿರುವುದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಹಾನಗಲ್ ಪಟ್ಟಣದ ಜಗದೀಶ ಮನೋಹರ ಕೊಲ್ಲಾಪುರ ಕೊಲೆಯಾಗಿರುವ ವ್ಯಕ್ತಿಯಾಗಿದ್ದು, ದುಷ್ಮರ್ಮಿಗಳು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಯಾವ ಕಾರಣಕ್ಕೆ ಕೊಲೆಯನ್ನ ಮಾಡಲಾಗಿದೆ ಎಂಬುದು ತಿಳಿದು ಬಂದಿಲ್ಲ.
ಅಂಚಟಗೇರಿ ಗ್ರಾಮದ ಸಿದ್ಧಾರೂಢ ನಗರದ ಮಂಜುನಾಥ ಅವರ ಅಳಿಯನಾಗಿರುವ ಜಗದೀಶ, ಮಾವನ ಮನೆಗೆ ಕಳೆದ ಐದಾರೂ ದಿನದ ಹಿಂದ ಬಂದಿದ್ದ. ಕೊಲೆ ಯಾವ ಸಮಯದಲ್ಲಿ ನಡೆದಿದೆ ಎಂಬುದು ಕೂಡಾ ನಿಖರವಾಗಿ ತಿಳಿದು ಬಂದಿಲ್ಲ.
ಬೆಳಗಿನ ಜಾವ ಚೆನ್ನಾಪುರ ರಸ್ತೆಯಲ್ಲಿ ಸಾರ್ವಜನಿಕರು ಸಂಚಾರ ಮಾಡುವಾಗ ಜಗದೀಶನ ಕೊಲೆಯಾದ ಶವ ಪತ್ತೆಯಾಗಿದೆ. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಪರಿಶೀಲನೆ ಮಾಡುತ್ತಿದ್ದಾರೆ.