ಚಂದ್ರಶೇಖರ ಇಂಡಿ ಎರಡು ದಿನ ಸಿಬಿಐ ಕಸ್ಟಡಿಗೆ
1 min read
ಧಾರವಾಡ: ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೇಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಮಾವರನ್ನ ನ್ಯಾಯಾಲಯ ಎರಡು ದಿನ ಸಿಬಿಐ ಕಸ್ಟಡಿಗೆ ನೀಡಿದೆ.
ಕಳೆದ ೆರಡು ದಿನದ ಹಿಂದೆ ತನ್ನ ವಶಕ್ಕೆ ಪಡೆದಿದ್ದ ಸಿಬಿಐ, ನಿನ್ನೆ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ, ಮಾಜಿ ಸಚಿವ ವಿನಯ ಕುಲಕರ್ಣಿ ಮಾವ ಚಂದ್ರಶೇಖರ ಇಂಡಿಯವರಿಗೆ 14ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಇಂದು ಹೆಚ್ಚಿನ ವಿಚಾರಣೆಗೆ ಸಿಬಿಐ ಚಂದ್ರಶೇಖರ ಇಂಡಿಯವರನ್ನ ಕಸ್ಟಡಿಗೆ ನೀಡುವಂತೆ ಕೇಳಿದ್ದರಿಂದ, ನ್ಯಾಯಾಲಯ ಎರಡು ದಿನದವರೆಗೆ ಸಿಬಿಐ ಕಸ್ಟಡಿಗೆ ನೀಡುವ ಆದೇಶ ಮಾಡಿದೆ. ನಾಡಿದ್ದು ಸಂಜೆ ಐದು ಗಂಟೆಗೆ ಮತ್ತೆ ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆಯಿದೆ.
ಯೋಗೇಶಗೌಡ ಹತ್ಯೆ ಸಮಯದಲ್ಲಿ ನಡೆದ ವಿಚಾರಗಳಿಗೆ ಸಂಬಂಧಿಸಿದಂತೆ ಚಂದ್ರಶೇಖರ ಇಂಡಿಯನ್ನ ಹಲವು ಬಾರಿ ಸಿಬಿಐ ವಿಚಾರಣೆ ನಡೆಸಿ, ಕೊನೆ ಗಳಿಗೆಯಲ್ಲಿ ಬಂಧನ ಮಾಡಿದ್ದು, ಮತ್ತೆ ಈಗ ಕಸ್ಟಡಿಗೆ ಪಡೆಯುತ್ತಿರುವುದು ಹಲವು ವಿಚಾರಗಳು ಹೊರಬರುವ ಸಾಧ್ಯತೆಯಿದೆ ಎನ್ನಲಾಗಿದೆ.