Posts Slider

Karnataka Voice

Latest Kannada News

ಹುಬ್ಬಳ್ಳಿಯಾತ ಮುಂಡಗೋಡದಲ್ಲಿ ಬಂಧನ: ಲಕ್ಷಾಂತರ ಚಿನ್ನಾಭರಣ ವಶ

1 min read
Spread the love

ಉತ್ತರಕನ್ನಡ: ಮನೆಯಲ್ಲಿ ಜನರು ಮಲಗಿದಾಗಲೇ ಯಾವುದೇ ರೀತಿಯ ಶಬ್ಧ ಮಾಡದ ಹಾಗೇ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಬಂಧಿಸುವಲ್ಲಿ ಮುಂಡಗೋಡ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನ ವಶಕ್ಕೆ ಪಡೆಯಲಾಗಿದೆ.

ಹುಬ್ಬಳ್ಳಿ ತಾಲೂಕಿನ ಕಮಲಾನಗರ ತಾಂಡಾದ ಕ್ರಷ್ಣಾ ಲಮಾಣಿ ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ ಸುಮಾರು 3.5 ಲಕ್ಷ ರೂ ಬೆಲೆಯ 70 ಗ್ರಾಂ ತೂಕದ ಬಂಗಾರದ ಆಭರಣ, ಸುಮಾರು 15 ಸಾವಿರ ರೂ ಬೆಲೆಯ 200 ಗ್ರಾಂ ಬೆಳ್ಳಿಯ ಆಭರಣ ಹಾಗೂ 31 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ.

ಕಳೆದ ಅಕ್ಟೋಬರ್ 19ರಂದು ಮುಂಡಗೋಡ ಠಾಣಾ ವ್ಯಾಪ್ತಿಯ ಮೈನಳ್ಳಿಯಲ್ಲಿ ಒಂದೇ ದಿನ ಎರಡು ಮನೆ ಕಳ್ಳತನವಾಗಿದ್ದು, ಆರೋಪಿಯು ಕಳುವು ಮಾಡುವಾಗ ಮನೆಯ ಜನರು ಎಚ್ಚರವಾಗಿ ಅವನನ್ನು ಬೆನ್ನು ಹತ್ತಿ ಹಿಡಿಯಲು ಪ್ರಯತ್ನಿಸಿದರಾದರೂ ಆರೋಪಿಯು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ತನಿಖೆ ನಡೆಸಿದ ಪೋಲಿಸರು ಪತ್ತೆಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ 2018 ರಿಂದ ಇಲ್ಲಿಯವರಗೆ ಮುಂಡಗೋಡ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾನೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಬದರಿನಾಥ, ಶಿರಸಿ ಡಿ.ಎಸ್.ಪಿ ಜಿ. ಟಿ. ನಾಯಕ ರವರ ಮಾರ್ಗದರ್ಶನದಲ್ಲಿ ಮುಂಡಗೋಡ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಭುಗೌಡ. ಡಿ. ಕೆ, ಮಹಿಳಾ ಪಿ.ಎಸ್.ಐ. ಮೋಹಿನಿ ಶೆಟ್ಟಿ. ಪಿ.ಎಸ್.ಐ ಬಸವರಾಜ ಮಬನುರ, ಎ.ಎಸ್.ಐ ಅಶೋಕ ರಾಠೋಡ, ಎ.ಎಸ್.ಐ. ಖೀರಪ್ಪಾ ಘಟಕಾಂಬಳೆ, ಎ.ಎಸ್.ಐ ಶೇಡಜಿ ಚವ್ಹಾಣ ಹಾಗೂ ಸಿಬ್ಬಂದಿಗಳಾದ ಧರ್ಮರಾಜ ನಾಯ್ಕ, ರಾಘವೇಂದ್ರ ನಾಯ್ಕ, ಭಗವಾನ ಗಾಂವಕರ, ವಿನೋದಕುಮಾರ, ಜಿ. ಬಿ. ಅರುಣ ಬಾಗೇವಾಡಿ, ಶರತ ದೇವಳಿ, ತಿರುಪತಿ ಚೌಡಣ್ಣವರ, ವಿವೇಕ ಪಟಗಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *