ಕುಂದಗೋಳ ಮಾಜಿ ಶಾಸಕ ಎಂ.ಎಸ್.ಅಕ್ಕಿ ನಾಳೆ ಕಾಂಗ್ರೆಸ್ ಗೆ ಸೇರ್ಪಡೆ
ಬೆಂಗಳೂರು: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ನಾಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ನೇತೃತ್ವದಲ್ಲಿ ಕಾಂಗ್ರೆಸಗೆ ಸೇರ್ಪಡೆಯಾಗಲಿದ್ದಾರೆ.
ಹಲವು ದಿನಗಳ ಹಿಂದಿನಿಂದಲೂ ಕಾಂಗ್ರೆಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎಂ.ಎಸ್.ಅಕ್ಕಿಯವರು ಕಳೆದ ತಿಂಗಳು, ಕಾಂಗ್ರೆಸಗೆ ಸೇರ್ಪಡೆಯಾಗುತ್ತಾರೆಂಬ ಊಹಾಪೋಹಗಳು ಎದ್ದಾಗ, ಕಾಂಗ್ರೆಸ್ ಸೇರ್ಪಡೆಯನ್ನ ತಳ್ಳಿ ಹಾಕಿದ್ದರು.
ಇದೀಗ ನಾಳೆ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದನ್ನ ಸ್ವತಃ ಎಂ.ಎಸ್.ಅಕ್ಕಿ ಖಚಿತ ಪಡಿಸಿದ್ದು, ಸೇರ್ಪಡೆಯಾಗಿ ಮರಳಿ ಬಂದು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವುದಾಗಿ ಹೇಳಿದ್ದಾರೆ.
ಒಂದು ಕಾಲದಲ್ಲಿ ದಿವಂಗತ ಶಾಸಕ ಸಿ.ಎಸ್.ಶಿವಳ್ಳಿ ವಿರುದ್ಧ ರಾಜಕೀಯ ಮಾಡಿದ್ದ, ಎಂ.ಎಸ್.ಅಕ್ಕಿ ಶಿವಳ್ಳಿಯವರ ಪತ್ನಿ ಶಾಸಕರಿರುವಾಗ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.
ನಾಳೆ ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವುಕುಮಾರ, ಸಲೀಮ ಅಹ್ಮದ ಮತ್ತು ಮಾಜಿ ಸಿಎಂ ಸಿದ್ಧರಾಮಯ್ಯ ಸಮ್ಮುಖದಲ್ಲಿ ಪಕ್ಷದ ಶಾಲನ್ನ ಹಾಕಿಕೊಳ್ಳಲಿದ್ದಾರೆ.