ಸಭಾಪತಿ ನಾನೇ ಆಗಬಹುದು: ಬಸವರಾಜ ಹೊರಟ್ಟಿ
1 min read
ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷ, ಜಾತ್ಯಾತೀತ ಜನತಾದಳ ಹಾಗೂ ಕಾಂಗ್ರೆಸಿನಲ್ಲಿ ನನಗೆ ಬೇಕಾದವರು ಸಾಕಷ್ಟು ಜನರಿದ್ದಾರೆ. ಹೀಗಾಗಿ ನಾನು ಎಲ್ಲರಿಗೂ ಸರ್ವಸಮ್ಮತ ಸಭಾಪತಿ ಆಗಬಹುದೆಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಹುಬ್ಬಳ್ಳಿಯ ಐಟಿ ಪಾರ್ಕನಲ್ಲಿ ನಡೆದ ನಗರಾಭಿವೃದ್ಧಿ ಇಲಾಖೆಯ ಸಭೆಯ ನಂತರ ಮಾತನಾಡಿದ ಬಸವರಾಜ ಹೊರಟ್ಟಿ, ಬಹುತೇಕ ನಾನೇ ಸಭಾಪತಿ ಆಗಬಹುದು. ಯಾರೂ ವಿರೋಧ ಮಾಡುವ ಸಂಭವ ಕಡಿಮೆಯಿದೆ ಎಂದು ಹೇಳಿದರು.
ಕೊನೆಗಳಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನ ಹಾಕಿದರೇ ಆಗ ನೋಡಬೇಕಾಗತ್ತೆ. ಆದರೆ, ಯಾರೂ ಆ ಥರ ಮಾಡಲಿಕ್ಕಿಲ್ಲ ಎಂದ ಬಸವರಾಜ ಹೊರಟ್ಟಿ ಅವರಿಗೆ ಅವರ ಅಭಿಮಾನಿಗಳು, ಸಿಹಿಯನ್ನ ತಿನಿಸಿ ಸಂತಸಪಟ್ಟರು.
ವಿಧಾನಪರಿಷತ್ ಗೆ ಬಸವರಾಜ ಹೊರಟ್ಟಿ ಸಭಾಪತಿಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಹೊರಟ್ಟಿಯವರು ಇದೇಲ್ಲವನ್ನ ಮಾತಾಡುವಾಗ ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಜೊತೆಗಿದ್ದರು.