ಶಾಸಕ ಶಂಕರ ಪಾಟೀಲಮುನೇನಕೊಪ್ಪರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ
1 min read
ಬೆಂಗಳೂರು: ಸರಕಾರದ ವಿವಿಧ ಇಲಾಖೆಗಳ ಅಧೀನದ ನಿಗಮ ಮಂಡಳಿಗಳಿಗೆ ಅಧ್ಯಕ್ಷರಾಗಿದ್ದ ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರಿಗೆ ಸಂಪುಟ ದರ್ಜೆಯ ಸಚಿವರ ಸ್ಥಾನಮಾನ ನೀಡಿ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ಸಂಸ್ಥೆ ಬೆಂಗಳೂರು ಇದರ ಅಧ್ಯಕ್ಷರಾಗಿರುವ ಶಂಕರ ಪಾಟೀಲಮುನೇನಕೊಪ್ಪ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ಸಿಕ್ಕಿದೆ.
ಕೆಲವು ತಿಂಗಳ ಹಿಂದೆ ನಿಗಮಕ್ಕೆ ಆಯ್ಕೆ ಮಾಡಿದ್ದ ರಾಜ್ಯ ಸರಕಾರ, ಇದೀಗ ಬಹುತೇಕ ಎಲ್ಲ ನಿಗಮದ ಅಧ್ಯಕ್ಷರಿಗೂ ಈ ಸ್ಥಾನಮಾನವನ್ನು ನೀಡಿದ್ದು, ಧಾರವಾಡ ಜಿಲ್ಲೆಗೆ ಮತ್ತೊಂದು ರೀತಿಯ ಅವಕಾಶ ದೊರೆತಂತಾಗಿದೆ.
ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲಮುನೇನಕೊಪ್ಪ, ಯಾವುದೇ ಸ್ಥಾನಮಾನವನ್ನು ಬಯಸದೇ ಇದ್ದರೂ ಅವರನ್ನ ಹುಡುಕಿಕೊಂಡು ಅವಕಾಶಗಳು ಬರುತ್ತಿವೆ.
ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅಭಿಮಾನಿಗಳಲ್ಲಿ, ಶಾಸಕರು ಬೇಗನೇ ಮಂತ್ರಿಯಾಗಲಿ ಎಂಬ ಹೆಬ್ಬಯಕೆಯಿದ್ದು, ಅದು ಯಾವಾಗ ಶಂಕರ ಪಾಟೀಲಮುನೇನಕೊಪ್ಪರಿಗೆ ಸಿಗತ್ತೋ ಎಂದು ಕಾಯುವಂತಾಗಿದೆ. ಉತ್ತಮ ಆಡಳಿತ, ನೇರ ಮಾತುಗಳಿಂದ ಹೆಸರುವಾಸಿಯಾಗಿರುವ ಮುನೇನಕೊಪ್ಪ ಅವರು, ಸಚಿವ ಸ್ಥಾನವನ್ನ ನಿಭಾಯಿಸುವ ಜಾಣ್ಮೆ ಹೊಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.