ಶಾಸಕ ಪ್ರಸಾದ ಅಬ್ಬಯ್ಯ ಸುಳ್ಳು ಹೇಳ್ಯಾರ್: ನಾ ಸುಮ್ಮನ್ ಕೂಡಲ್ಲ- ಶಿವಾನಂದ ಮುತ್ತಣ್ಣನವರ
1 min read
ಹುಬ್ಬಳ್ಳಿ: ಶಾಸಕ ಪ್ರಸಾದ ಅಬ್ಯಯ್ಯ ರೈತರು ಕೊಟ್ಟಿದ್ದಾರೆಂದು ಸುಳ್ಳು ಹೇಳಿದ್ದಾರೆ. ಅಲ್ಲಿರೋ ಜಾಗ ಮಹಾನಗರ ಪಾಲಿಕೆ ಮತ್ತು ಸರಕಾರದ್ದು. ಹಾಗಾಗಿಯೇ, ಅಲ್ಲಿ ಮಹಿಳಾ ಸಮುದಾಯಕ್ಕೆ ಕಟ್ಟಡ ಇರಬೇಕೆಂದು ಹೇಳಿದ್ದೇವು. ಮೊದಲು ಮಾಡೋಣ ಎಂದಿದ್ದ ಶಾಸಕ ಪ್ರಸಾದ ಅಬ್ಬಯ್ಯ, ಸುಖಾಸುಮ್ಮನೆ ಹೇಳುತ್ತಿದ್ದಾರೆಂದು ಪಾಲಿಕೆಯ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣನವರ ಹೇಳಿದರು.
ಹುಬ್ಬಳ್ಳಿ ವೀರಾಪುರ ಓಣಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕರ್ನಾಟಕ ಒನ್ ಸಮಗ್ರ ನಾಗರಿಕ ಸೇವಾ ಕೇಂದ್ರದ ಕಟ್ಟಡ ಉದ್ಘಾಟಿನೆ ವೇಳೆ ಮಾತಿನ ಚಕಮಕಿಗೆ ಅಸಲಿ ಕಾರಣವೇನು ಎನ್ನುವುದನ್ನ ಮುತ್ತಣ್ಣನವರ ವಿವರಿಸಿದ್ದಾರೆ.
ಮಹಾನಗರ ಪಾಲಿಕೆಯ ಜಾಗವನ್ನ ಕೆಲವರು ಅತಿಕ್ರಮಣ ಮಾಡಿಕೊಂಡಿದ್ದರು. ಅದರಲ್ಲಿಯೇ ಓರ್ವ ಅಧಿಕಾರಿ ತಮ್ಮ ಹೆಸರನ್ನ ಮಾಡಿಕೊಂಡಿದ್ದರು. ಅದಕ್ಕೇಲ್ಲ ಹೋರಾಟ ಮಾಡಿದ್ದು ನಾವು. ಆಗಲೇ, ಮಹಿಳಾ ಸಮುದಾಯ ಭವನದ ಬಗ್ಗೆ ಮಾತುಕತೆಯಾಗಿತ್ತು. ಆದರೆ, ಅದನ್ನ ಶಾಸಕ ಪ್ರಸಾದ ಅಬ್ಬಯ್ಯ ಮರೆತಿದ್ದಾರೆ.
ನಾನೂ ಸುಮ್ಮನೆ ಕೂರಲ್ಲ. ಸಚಿವರು ಮಾಡೋಣ ಎಂದಿದ್ದಕ್ಕೆ ಸುಮ್ಮನೆ ಬಂದಿದ್ದೇನೆ. ಈ ಜಾಗ ಯಾವುದೇ ರೈತರಿಗೆ ಸಂಬಂಧಿಸಿದ್ದಲ್ಲ. ಸುಳ್ಳೇ ಸುಳ್ಳು ಹೇಳಿ ಜನರನ್ನ ದಾರಿ ತಪ್ಪಿಸುವುದನ್ನ ಶಾಸಕರು ಮಾಡಬಾರದೆಂದು ಮುತ್ತಣ್ಣನವರ ಆಗ್ರಹಿಸಿದ್ದಾರೆ.