ಕಾಂಗ್ರೆಸ್ ನ ಮಾಜಿ ಸಚಿವರ ಪುತ್ರ ಅರೆಸ್ಟ್: ಹೈಡ್ರೋ ಗಾಂಜಾ ಪ್ರಕರಣ
1 min read
ಹಾವೇರಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಮಂತ್ರಿಗಳಿಗೆ ಒಂದಿಲ್ಲಾ ಒಂದು ರೀತಿಯಲ್ಲಿ ತೊಂದರೆಗಳು ಆವರಿಸಿಕೊಳ್ಳುತ್ತಿದ್ದ, ಮಾಜಿ ಸಚಿವ ವಿನಯ ಕುಲಕರ್ಣಿ ಜೈಲು ಪಾಲಾದ ದಿನವೇ ಹಾವೇರಿ ಜಿಲ್ಲೆಯ ಮಾಜಿ ಮಂತ್ರಿಯೊಬ್ಬರ ಮಗ ಬಂಧನವಾಗಿದ್ದಾರೆ.
ಮಾಜಿ ಸಚಿವ ರುದ್ರಪ್ಪ ಲಮಾಣಿ ಮಗ ದರ್ಶನ್ ಬಂಧನವಾದ ಹಿನ್ನೆಲೆಯಲ್ಲಿ ಹಾವೇರಿಯಲ್ಲಿರುವ ಸಚಿವರ ಮನೆ ಬಿಕೋ ಎನ್ನುತ್ತದೆ. ದರ್ಶನ ಲಮಾಣಿ ಹೈಡ್ರೋ ಗಾಂಜಾ ಪ್ರಕರಣದಲ್ಲಿ ಬಂಧನವಾಗಿದ್ದರಿಂದ ಮನೆಯವರೆಲ್ಲರೂ ಖಾಲಿ ಮಾಡಿದ್ದಾರೆ.
ಹಾವೇರಿಯ ನೇತಾಜಿ ನಗರದಲ್ಲಿರುವ ಮನೆಯಲ್ಲಿ ಯಾರೂ ಇಲ್ಲದೇ ಬೀಗ ಹಾಕಲಾಗಿದ್ದು, ಇನ್ನುಳಿದ ಕೆಲವರ ಬಂಧನದ ಬೀತಿಯಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಚಾಮರಾಜನಗರದಲ್ಲಿ ಬಂಧನವಾಗಿರುವ ಸಚಿವರ ಪುತ್ರನನ್ನ ಪೊಲೀಸರು ಮತ್ತಷ್ಟು ವಿಚಾರಣೆ ಮಾಡುತ್ತಿದ್ದಾರೆ.
ಈ ಬಗ್ಗೆ ಯಾವುದೇ ಮಾಹಿತಿಯಿಲ್ಲದ ಕುಟುಂಬಸ್ಥರು, ಬೆಂಗಳೂರಿಗೆ ತೆರಳಿದ್ದು ಪ್ರಕರಣದ ಬಗ್ಗೆ ಅರಿಯುವ ಪ್ರಯತ್ನಕ್ಕೆ ಇಳಿದಿದ್ದಾರೆಂದು ಹೇಳಲಾಗಿದೆ.