ಸಚಿವ ಈಶ್ವರಪ್ಪನವರೂ, ಸಂಘದ ಷಡಕ್ಷರಿಯವರೂ.. ಪೋಟೊ ತೆಗಿಸಿಕೊಡೋ ಪ್ರಯತ್ನವೂ..
1 min read
ಹುಬ್ಬಳ್ಳಿ: ನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿರುವ ಸಚಿವ ಕೆ.ಎಸ್.ಈಶ್ವರಪ್ಪನವರ ಜೊತೆ ಪೋಟೊ ತೆಗೆಸಿಕೊಡಲು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಸಾಕಷ್ಟು ಮುತುವರ್ಜಿ ವಹಿಸುತ್ತಿದ್ದ ಘಟನೆ ಹುಬ್ಬಳ್ಳಿಯ ಸರ್ಕೀಟ್ ಹೌಸನಲ್ಲಿ ನಡೆಯಿತು.
ಹೆಂಗಿದೆ ನೋಡಿ ವೀಡಿಯೋ
ಪಿಡಿಓಗಳ ಸಮಾವೇಶ ಹಾಗೂ ಧಾರವಾಡದಲ್ಲಿ ಕಟ್ಟಡವೊಂದರ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಈಶ್ವರಪ್ಪನವರ ಹೊರಗೆ ಬಂದ ತಕ್ಷಣವೇ, ಮುಂಚೂಣಿಯಲ್ಲಿ ನಿಂತಿದ್ದ ಷಡಕ್ಷರಿಯವರು, ಸರಕಾರಿ ನೌಕರರನ್ನ ಕರೆ ಕರೆದು ಪೋಟೊ ತೆಗೆಸಿಕೊಳ್ಳುವುದಕ್ಕೆ ಅನುಕೂಲ ಮಾಡಿಕೊಟ್ಟರು. ಬೊಕ್ಕೆ ಕೊಡಲು ಬಂದವರನ್ನೂ, ‘ ಗೌಡ್ರೇ, ಹಾಂ.. ನಿಲ್ಲಿ. ಇಲ್ಲೇ ಕೊಡಿ’ ಎನ್ನುತ್ತಿದ್ದಾಗಲೇ, ಸಚಿವ ಈಶ್ವರಪ್ಪನವರ ಮಾತು. ಆಗ ಕೈ ಮುಗಿದು ನಿಂತಿದ್ದು ಷಡಕ್ಷರಿಯವರು.
ಇದೇಲ್ಲವನ್ನೂ ನೌಕರರ ಸಂಘದ ರಾಜ್ಯಾಧ್ಯಕ್ಷರು ಮಾಡಬೇಕು ಅನಿಸತ್ತೆ. ಇಲ್ಲದಿದ್ದರೇ ನೌಕರರ ಸಂಘದ ಪದಾಧಿಕಾರಿಗಳು ಕೋಪಗೊಳ್ತಾರಾ.. ಗೊತ್ತಿಲ್ಲ. ದೃಶ್ಯಗಳು ಮಾತ್ರ ಹಲವು ರೀತಿಯಲ್ಲಿ ವ್ಯಾಖ್ಯಾನಿಸುವಂತೆ ಕಾಣಿಸುತ್ತಿತ್ತು.
ಪಿಡಿಓಗಳ ಬಗ್ಗೆ ತಮ್ಮದೇ ಸರಕಾರದ ಸಚಿವರು ಮಾತನಾಡಿದ್ದರಲ್ಲಾ ಎಂದು ಪ್ರಶ್ನಿಸಿದಾಗ, ಅದ್ಯಾವ ಕಾಲದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎನ್ನುತ್ತಲೇ ಕಾರನ್ನೇರಿದರು.
ನಾವೇಲ್ಲ ಇರುವ ಕಾಲದಲ್ಲಿಯೇ ನಿಮ್ಮದೇ ಸರಕಾರದ ಸಚಿವ ಸೋಮಣ್ಣನವರು ಹೀಗೆ ಹೇಳಿದ್ದಾರೆಂದು, ಈಶ್ವರಪ್ಪನವರ ಕಾಲದ ಜನರು ಅವರಿಗೆ ಹೇಳಬೇಕಾಗಿದೆ..