ಗುಮ್ಮಟನಗರಿ ಜಿಲ್ಲೆಯಲ್ಲಿ ಆ ಸಚಿವರು ಬೆಳ್ಳಂಬೆಳಿಗ್ಗೆ ಮಾಡುತ್ತಿರುವುದೇನು..?
1 min read
ವಿಜಯಪುರ: ಕಗ್ಗೊಡು ಗೋರಕ್ಷಕ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಅತ್ಯಂತ ಅದ್ಭುತವಾಗಿ ಗೋಶಾಲೆವನ್ನು ನಿರ್ವಹಣೆ ಮಾಡಿರುವುದನ್ನು ಕಂಡು ಸಂತೋಷ ಆಗಿದೆ ಎಂದು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಹೇಳಿದರು.
ಗೋವು ಪೂಜೆ ನೆರವೇರಿಸಿ ಮಾತನಾಡಿದ ಸಚಿವರು ಸಿದ್ದೇಶ್ವರ ಸಂಸ್ಥೆ ವತಿಯಿಂದ ನೋಡಿಕೊಳ್ಳಲಾಗುತ್ತಿರುವ ಗೋಶಾಲೆ ಅಂದಾಜು 70 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ ಮಾಡಿ ಇಲ್ಲಿ ಆರೈಕೆ ಮಾಡಲಾಗುತ್ತಿದೆ ಎಂದು ಹೇಳಿದರು.
ಸುಮಾರು 700 ಗೋವುಗಳನ್ನು ಇಲ್ಲಿ ಆರೈಕೆ ಮಾಡಲಾಗುತ್ತಿದೆ. ಗೋವುಗಳ ಆರೈಕೆಗಾಗಿ ಇಲ್ಲಿಯೇ ಪಶುಚಿಕಿತ್ಸಾಲಯ ಹಾಗೂ ಪಶುಗಳ ಸೇವೆಗಾಗಿ ಆಂಬುಲೆನ್ಸ್ ಇರುವುದು ಗೋವುಗಳ ಬಗ್ಗೆ ಸಂಸ್ಥೆಗಿರುವ ಕಾಳಜಿಯನ್ನು ಎತ್ತಿತೋರಿಸುತ್ತದೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಸಿದ್ದೇಶ್ವರ ಸಂಸ್ಥೆಯ ನಿರ್ದೇಶಕ ರಾಮನಗೌಡ ಪಾಟೀಲ್, ಕಾರ್ಯದರ್ಶಿ ದೇಸಾಯಿ ಇಲಾಖೆಯ ಆಯುಕ್ತ ಬಸವರಾಜೇಂದ್ರ ಹಾಗೂ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣದಲ್ಲಿ ಇಂದು ಆರ್.ಕೆ.ವಿ.ವೈ ಅಡಿಯಲ್ಲಿ ನಿರ್ಮಾಣವಾಗಳಿರುವ ಪಶು ಆಸ್ಪತ್ರೆಯ ಹೆಚ್ಚುವರಿ ಕಟ್ಟಡ ನಿರ್ಮಾಣದ ಭೂಮಿ ಪೂಜೆಯನ್ನು ಮಾನ್ಯ ಪಶುಸಂಗೋಪನೆ ಪೇಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ನೆರವೇರಿಸಿದರು. ಈ ಸಂದರ್ಭದಲ್ಲಿ ಬಸವನೆಬಾಗೇವಾಡಿ ಶಾಸಕ ಶಿವಾನಂದ್ ಪಾಟೀಲ್, ಇಲಾಖೆಯ ಆಯುಕ್ತ ಬಸವರಾಜೇಂದ್ರ ಪಟ್ಟಣ ಪಂಚಾಯತ್ ಅಧ್ಯಕ್ಷೆ ನೀಲಮ್ಮ ಹಾಗೂ ಸದಸ್ಯರು ಹಾಜರಿದ್ದರು.