Posts Slider

Karnataka Voice

Latest Kannada News

ಸಚಿವ ಸಂಪುಟ ಪುನರ್ ರಚನೆಗೆ ಇನ್ನೂ ಸಿಗ್ತಿಲ್ಲ ಗ್ರೀನ್ ಸಿಗ್ನಲ್: ಬೀಗರನ್ನೂ ಸಮಾಧಾನ ಮಾಡುವ ಸ್ಥಿತಿಗೆ ತಲುಪಿದ ಸಿಎಂ ಯಡಿಯೂರಪ್ಪ

1 min read
Spread the love

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎರಡು ಬಾರಿ ಹೈಕಮಾಂಡ್ ಭೇಟಿ ಮಾಡಿ ಬರಿಗೈಲಿ ವಾಪಾಸಾಗಿದ್ದಾರೆ. ಉಪ ಚುನಾವಣೆಯ ಭರ್ಜರಿ ಗೆಲವಿನ ಬಳಿಕವೂ ಹೈಕಮಾಂಡ್ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಲು ಅನುಮತಿ ನೀಡದಿರುವುದು ಕುತೂಹಲ ಮೂಡಿಸಿದೆ. ಮತ್ತೊಂದೆಡೆಡ ಯಡಿಯೂರಪ್ಪ ಅವರ ಮೇಲೆ ದಿನದಿಂದ ದಿನಕ್ಕೆ ಮಂತ್ರಿಸ್ಥಾನದ ಆಕಾಂಕ್ಷಿಗಳ ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಹೈಕಮಾಂಡ್‌ಗೆ ಎಚ್ಚರಿಕೆ ಸಂದೇಶ ರವಾನಿಸಿರುವ ಯಡಿಯೂರಪ್ಪ ಅವರು, ಪಕ್ಷದಲ್ಲಿನ ನಾಯಕರ ಅಸಮಾಧಾನವನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ.

ಸಪುಟ ವಿಸ್ತರಣೆ ಮಾಡಲು ಹೈಕಮಾಂಡ್ ಅನುಮತಿ ಕೊಡುತ್ತದೆಯೊ? ಇಲ್ಲವೊ ಎಂಬ ತೀರ್ಮಾನಕ್ಕೆ ಯಡಿಯೂರಪ್ಪ ಅವರು ಬಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ತಮ್ಮ ಆಪ್ತರಿಗೆ ಆದಷ್ಟು ಸಹಾಯ ಮಾಡುವ ಉದ್ದೇಶದಿಂದ ಹಾಗೂ ಮುಂದಿನ ರಾಜಕೀಯ ಭವಿಷ್ಯದ ಹಿನ್ನೆಲೆಯಲ್ಲಿ ಈ ತೀರ್ಮಾನವನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ. ತಮ್ಮ ಆದೇಶದ ಮೂಲಕ ಸಿಎಂ ಯಡಿಯೂರಪ್ಪ ಅವರು ಹೈಕಮಾಂಡ್‌ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರಾ..?

ಸಿಎಂ ಯಡಿಯೂರಪ್ಪ ಅವರು ತಮ್ಮ ನಿರ್ಧಾರದಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ. ಸಾಮಾನ್ಯವಾಗಿ ಸಂಪುಟ ವಿಸ್ತರಣೆ ಅಥವಾ ಪನಾರಚನೆ ಬಳಿಕ ಕರ್ನಾಟಕ ನಿಗಮ-ಮಂಡಳಿಗಳಿಗೆ ನೇಮಕಾತಿ ಮಾಡಲಾಗುತ್ತದೆ. ಆ ಮೂಲಕ ಮಂತ್ರಿಸ್ಥಾನ ವಂಚವಿತರನ್ನು ಸಮಾಧಾನ ಮಾಡಲಾಗುತ್ತದೆ.

ಆದರೆ ಸಿಎಂ ಯಡಿಯೂರಪ್ಪ ಅವರು ಈ ಬಾರಿ ಸಂಪ್ರದಾಯ ಮುರಿದಿದ್ದಾರೆ. ದಿಢೀರ್ ಅಂತಾ ನಿಗಮ-ಮಂಡಳಿಗಳಿಗೆ ನೇಮಕ ಮಾಡಿ ಆದೇಶ ಮಾಡಿದ್ದಾರೆ. ನಿಗಮ-ಮಂಡಳಿಗಳಿಗೆ ಎರಡನೇ ಕಂತಿನ ನೇಮಕಾತಿ ಮಾಡಿರುವ ಯಡಿಯೂರಪ್ಪ ಅವರು, ಒಟ್ಟು 27 ಮುಖಂಡರಿಗೆ ನೇಮಕಾತಿ ಭಾಗ್ಯ ಒಲಿದಿದೆ. ಅಷ್ಟೇ ಅಲ್ಲ, ಯಡಿಯೂರಪ್ಪ ಸಂಬಂಧಿಯಾಗಿರುವ ಕುಂದಗೋಳ ಕ್ಷೇತ್ರದ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರಿಗೂ ನಿಗಮವನ್ನ ನೀಡಲಾಗಿದೆ.

ಕಳೆದ ಸೋಮವಾರಷ್ಟೆ (ನ.22) ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿದ್ದರು. ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದನ್ನೂ ಆ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದರು ಎನ್ನಲಾಗಿದೆ.

ಜೊತೆಗೆ ನಿಗಮ-ಮಂಡಳಿಗೆಳಿಗೆ ನೇಮಕಾತಿ ಮಾಡುವುದಾಗಿಯೂ ಯಡಿಯೂರಪ್ಪ ಅವರು ಹೇಳಿದ್ದರು. ನಿಗಮ ಮಂಡಳಿಗೆಳಿಗೆ ನೇಮಕ ಮಾಡಬೇಕಾದ ಪಕ್ಷದ ನಿಷ್ಠಾವಂತರ  ಪಟ್ಟಿಯನ್ನು ಕಟೀಲ್ ಅವರು ಯಡಿಯೂರಪ್ಪ ಅವರಿಗೆ ನೀಡಿದ್ದರು. ಇದೀಗ ನಿಗಮ ಮಂಡಳಿಗಳಿಗೆ ನೇಮಕಾತಿ ನಡೆದಿದ್ದು, ಸಿಎಂ ಯಡಿಯೂರಪ್ಪ ಅವರ ಆಪ್ತರಿಗೆ ಹೆಚ್ಚು ಅವಕಾಶ ಸಿಕ್ಕಿವೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬಂದಿವೆ.

ಸಂಪುಟ ವಿಸ್ತರಣೆ ವಿಳಂಬಾಗುತ್ತಿರುವುದರ ಹಿನ್ನೆಲೆಯಲ್ಲಿಯೇ ನಿಗಮ ಮಂಡಳಿಗಳಿಗೆ ನೇಮಕ ಮಾಡುವ ಮೂಲಕ ಹೈಕಮಾಂಡ್‌ಗೆ ತಿರುಗೇಟು ನೀಡುವ ತಂತ್ರವನ್ನು ಸಿಎಂ ಯಡಿಯೂರಪ್ಪ ಅವರು ಮಾಡಿದ್ದಾರೆ ಎನ್ನಲಾಗಿದೆ.

ಸಧ್ಯ ಆಗಿರುವ ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಮಂತ್ರಿಸ್ಥಾನದ ಆಕಾಂಕ್ಷಿ ಶಾಸಕರು ಇಲ್ಲ. ಹೀಗಾಗಿ ಸಂಪುಟ ವಿಸ್ತರಣೆ ಬಳಿಕ ಉಂಟಾಗುವ ಅತೃಪ್ತಿಯನ್ನು ಸಿಎಂ ಯಡಿಯೂರಪ್ಪ ಅವರು ಹೇಗೆ ತಣಿಸುತ್ತಾರೆ ಎಂಬುದು ಚರ್ಚೆ ಹುಟ್ಟುಹಾಕಿದೆ.

ಸಿಎಂ ಯಡಿಯೂರಪ್ಪ ಅವರ ಆಪ್ತ ಶಾಸಕರೂ ಸೃತಿದಂತೆ ಹಲವರಿಗೆ ನಿಗಮ ಮಂಡಳಿ ನೇಮಕಾತಿಯಲ್ಲಿ ಅವಕಾಶ ಸಿಕ್ಕಿದೆ. ಜೊತೆಗೆ ಬಿಎಸ್‌ವೈ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರ ಆಪ್ತರಿಗೂ ನಿಗಮ ಮಂಡಳಿಗಳ ನೇಮಕದಲ್ಲಿ ಮನ್ನಣೆ ದೊರೆತಿದೆ. ನಿಗಮ ಮಂಡಳಿಗಳಿಗೆ ನೇಮಕವಾದವರ ಪಟ್ಟಿ ಹೀಗಿದೆ.

 

 

* ಎಸ್‌.ಐ. ಚಿಕ್ಕನಗೌಡ: ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ

* ಲಿಂಗರೆಡ್ಡಿ ಗೌಡ: ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ

* ವಿಜುಗೌಡ ಎಸ್‌. ಪಾಟೀಲ್: ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣ ಸಂಸ್ಥೆ

* ತಾರಾ ಅನುರಾಧ: ಅರಣ್ಯ ಅಭಿವೃದ್ಧಿ ನಿಗಮ

* ಬಿ.ಸಿ. ನಾಗೇಶ್‌: ಕಾರ್ಮಿಕ ಕಲ್ಯಾಣ ಮಂಡಳಿ

* ಎಸ್‌.ಆರ್‌. ವಿಶ್ವನಾಥ್‌: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

* ದುರ್ಯೋಧನ ಐಹೊಳೆ: ಡಾ. ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮ

*ಎಂ. ರುದ್ರೇಶ್: ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌)

* ಬಿ.ಕೆ. ಮಂಜುನಾಥ್‌: ನಾರು ಅಭಿವೃದ್ಧಿ ಮಂಡಳಿ

* ಎಸ್‌.ಆರ್‌. ಗೌಡ: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ

* ಕೆ.ವಿ. ನಾಗರಾಜ್‌: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ

* ಸವಿತಾ ವಿಶ್ವನಾಥ್‌: ಅಮರ್‌ಶೆಟ್ಟಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ

* ಚಂದು ಪಾಟೀಲ್: ನವೀಕರಿಸಬಹುದಾದ ಇಂಧನ ನಿಗಮ

* ಕಿರಣ್‌ಕುಮಾರ್‌: ಜೈವಿಕ ಇಂಧನ ಅಭಿವೃದ್ಧಿ ಮಂಡಳಿ

* ಎಲ್‌.ಆರ್‌. ಮಹದೇವಸ್ವಾಮಿ: ಮೈಸೂರು ಮೃಗಾಲಯ ಪ್ರಾಧಿಕಾರ

* ಎಚ್‌.ಸಿ. ತಮ್ಮೇಶಗೌಡ: ಕರ್ನಾಟಕ ವಿದ್ಯುತ್‌ ಕಾರ್ಖಾನೆ

* ಎಚ್‌. ಹನುಮಂತಪ್ಪ: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ

* ಎಂ. ರಾಮಚಂದ್ರ: ಕೇಂದ್ರ ಪರಿಹಾರ ಸಮಿತಿ

* ಸಿ. ಮುನಿಕೃಷ್ಣ: ಕರ್ನಾಟಕ ಆದಿ ಜಾಂಭವ ಅಭಿವೃದ್ಧಿ ನಿಗಮ

* ರಘು ಆರ್‌. (ಕೌಟಿಲ್ಯ): ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ

* ಬಾಬು ಪತ್ತಾರ್: ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ

* ಜಿ.ಕೆ. ಗಿರೀಶ್‌ ಉಪ್ಪಾರ್: ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ

* ಎಸ್‌. ನರೇಶ್‌ಕುಮಾರ್‌: ಸವಿತಾ ಸಮಾಜ ಅಭಿವೃದ್ಧಿ ನಿಗಮ

* ಎನ್‌ ಶಂಕರಪ್ಪ: ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ

* ಸಂತೋಷ್‌ ರೈ ಬೋಲಿಯಾರ್: ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌

*ಎಸ್‌ ಮಹದೇವಯ್ಯ: ಕರ್ನಾಟಕ ಕಾಂಪೋಸ್ಟ್‌ ಅಭಿವೃದ್ಧಿ ನಿಗಮ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸುತ್ತೂರು ಶ್ರೀ ಕ್ಷೇತ್ರದಲ್ಲಿ ಅತಿಥಿ ಗೃಹ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು


Spread the love

Leave a Reply

Your email address will not be published. Required fields are marked *