Posts Slider

Karnataka Voice

Latest Kannada News

ಮಂಡಳಿ ಅಧ್ಯಕ್ಷ ಕೊಟ್ಟರೂ, ನಾಲ್ಕೆ ದಿನದಲ್ಲಿ ಹಿಂಪಡೆದರು- ಏನ್ರೀ ಹನಮಂತ ಕೊಟಬಾಗಿಯವರೇ ಹಿಂಗೇಕಾಯಿತು..?

1 min read
Spread the love

ಧಾರವಾಡ: ಕಳೆದ ಡಿಸೆಂಬರ್ ನಾಲ್ಕರಂದು ಕರ್ನಾಟಕ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನ ನೀಡಿದ್ದ ರಾಜ್ಯ ಸರಕಾರ ನಾಲ್ಕೇ ದಿನದಲ್ಲಿ ಹಿಂದೆ ಪಡೆಯುವ ಮೂಲಕ, ಪ್ರಭಾವಿ ರಾಜಕಾರಣಿಗೆ ಹಿನ್ನೆಡೆಯಾಗಿದೆ.

ಭಾರತೀಯ ಜನತಾ ಪಕ್ಷದ ಪ್ರಮುಖರಾಗಿರುವ ಹನಮಂತ ಕೊಟವಾಗಿಯವರಿಗೆ ಮಂಡಳಿಯ ಅಧ್ಯಕ್ಷ ಸ್ಥಾನವನ್ನ ನೀಡಿದಾಗ, ಈ ಭಾಗದ ಹಲವರು ಸಾಕಷ್ಟು ಸಂತಸವನ್ನ ವ್ಯಕ್ತಪಡಿಸಿದ್ದರು. ಆದರೆ, ಆ ಸಂತಸ ನಾಲ್ಕೇ ದಿನದಲ್ಲಿ ಮಾಯವಾಗಿದೆ.

ಕಾಂಗ್ರೆಸನಲ್ಲಿದ್ದ ಹನಮಂತ ಕೊಟಬಾಗಿ ಅವರು ಮೊದಲು ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನ ಗುರುತಿಸಿಕೊಂಡು ನಂತರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ಈ ಘಟನೆಯಿಂದ ಗೊಂದಲ ಸೃಷ್ಟಿಯಾಗಿದ್ದು, ಯಾಕೆ ಹೀಗಾಗಿದೆ ಎಂಬುದನ್ನ ಸ್ವತಃ ಹನಮಂತ ಕೊಟಬಾಗಿಯವರೇ ಉತ್ತರ ನೀಡಬೇಕಿದೆ.


Spread the love

Leave a Reply

Your email address will not be published. Required fields are marked *