ಲವ್ ಯೂ ಎನ್ನುತ್ತಿದ್ದವನಿಂದ ಬೈಗುಳ: ಮನನೊಂದ ಯುವತಿ ನೇಣಿಗೆ ಶರಣು
1 min read
ಹುಬ್ಬಳ್ಳಿ: ತಾನು ಪ್ರೀತಿಸುತ್ತಿದ್ದ ಯುವಕನೇ ತನಗೆ ಬೈದನೆಂದು ಮನಸ್ಸಿಗೆ ಬೇಸರ ಮಾಡಿಕೊಂಡ ಯುವತಿಯೋರ್ವಳು ಮನೆಯಲ್ಲಿಯೇ ನೇಣಿಗೆ ಶರಣಾದ ಘಟನೆ ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದಾನಿಷ ಎಂಬ ಯುವಕನ್ನ ಪ್ರೀತಿಸುತ್ತಿದ್ದ ನೇಹಾ ಅಂಜುಮ್ ಎಂಬ ಯುವತಿಯೇ ನೇಣಿಗೆ ಶರಣಾಗಿದ್ದಾಳೆ. ದಾನಿಷನೊಂದಿಗೆ ಅತಿ ಸಲುಗೆಯಿಂದ ಇರುತ್ತಿದ್ದಳು. ಆತನೂ ಕೂಡಾ ಅಷ್ಟೊಂದು ಪ್ರೀತಿಯಿಂದಲೇ ನಡೆದುಕೊಂಡಿದ್ದ. ಾದರೆ, ಕೋಪ ಬಂದ ತಕ್ಷಣವೇ, ಆಕೆಗೆ ಮನಸ್ಸಿಗೆ ಹತ್ತುವಂತೆ ಬೈದನೆಂದು ಹೇಳಲಾಗಿದೆ.
ತನ್ನ ಪ್ರೀತಿಸಿದವನೇ ಹೀಗೆ ವಾಚಾರಗೋಚರ ಬೈದನೆಂದು ಮನೆಯಲ್ಲಿ ಎಲ್ಲರೂ ಹೊರಗೆ ಹೋದಾಗ, ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪಾಲಕರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರಿಗೆ ಮಾಹಿತಿಯನ್ನ ನೀಡಿದ್ದಾರೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಕಸಬಾಪೇಟೆ ಠಾಣೆ ಪೊಲೀಸರು, ಪ್ರಿಯಕರ ದಾನಿಷನನ್ನ ವಿಚಾರಣೆ ಮಾಡುತ್ತಿದ್ದಾರೆ. ಆದರೆ, ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ ಮಾಡಿ, ಬೈದ ಎನ್ನುವ ಕಾರಣಕ್ಕೆ ಪ್ರಾಣ ಕಳೆದುಕೊಂಡ, ಆಕೆಯ ಕುಟುಂಬವೀಗ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.