ವಿನಯ ಕುಲಕರ್ಣಿ ಜಾಮೀನು ಅರ್ಜಿ ವಾಪಾಸ್ ಪಡೆದ ವಿನಯ ಕುಲಕರ್ಣಿ ಪರ ವಕೀಲರು
1 min read
ಧಾರವಾಡ: ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜಾಮೀನು ಅರ್ಜಿಯನ್ನ, ವಿನಯ ಕುಲಕರ್ಣಿ ಪರ ವಕೀಲರು ಮರಳಿ ಪಡೆದಿದ್ದು, ಕೌತುಕಕ್ಕೆ ಕಾರಣವಾಗಿದೆ.
ಕಳೆದ ಹದಿನೈದು ದಿನಗಳ ಹಿಂದೆ ಸಿಬಿಐನಿಂದ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ವಿನಯ ಕುಲಕರ್ಣಿಯರ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯುವ ವೇಳೆ, ವಿನಯ ಕುಲಕರ್ಣಿ ಪರ ವಕೀಲರು, ತಾವು ಹಾಕಿದ್ದ ಜಾಮೀನು ಅರ್ಜಿಯನ್ನ ಮರಳಿ ಪಡೆದಿದ್ದಾರೆ.
ಧಾರವಾಡ ಮೂರನೇ ಹೆಚ್ಚುವರಿ ಸೆಷನ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಾಪಸ್ ಪಡೆದಿದ್ದರಿಂದ ಸಿಬಿಐ ಯಾವುದೇ ರೀತಿಯ ತಕಾರಾರು ಹಾಕದೇ ಮರಳಿದ್ದು, ಯಾವ ಕಾರಣಕ್ಕೆ ಮರಳಿ ಪಡೆದಿದ್ದಾರೆಂಬುದು ಗೊತ್ತಾಗಿಲ್ಲ.
ವಿನಯ ಕುಲಕರ್ಣಿ ಪರವಾಗಿ ಜಾಮೀನು ಅರ್ಜಿಯ ಸಂಬಂಧ ಇಂದಿನ ವಿಚಾರಣೆಯ ಕಾಲಕ್ಕೆ ಸೋಜಿಗ ಮೂಡಿಸುವಂತ ಬೆಳವಣಿಗೆ ನಡೆದಿದ್ದು, ಮತ್ತೆ ಹೊಸದಾಗಿ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ.
ಈಗಾಗಲೇ ಇದೇ ತಿಂಗಳ 23ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಮಾಜಿ ಸಚಿವ ವಿನಯ ಕುಲಕರ್ಣಿಯವರು ಹಿಂಡಲಗಾ ಜೈಲಿನಲ್ಲಿದ್ದಾರೆ.