ಕೊನೆಗೂ ಪೊಲೀಸ್ ಕಾನ್ಸಟೇಬಲ್ ಅಮಾನತ್ತು ಮಾಡಿದ ಹಿರಿಯ ಅಧಿಕಾರಿಗಳು..! ಹೀಗಾಗತ್ತೆ ಎಂದು ಮೊದಲೇ ಹೇಳಲಾಗಿತ್ತು..

ಹುಬ್ಬಳ್ಳಿ: ನವನಗರ ಎಪಿಎಂಸಿ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸಟೇಬಲ್ ರೋರ್ವರನ್ನ ವಕೀಲ ವಿನೋದ ಪಾಟೀಲ ಬಂಧನದ ಸಲುವಾಗಿ ಎದ್ದ ಗೊಂದಲಕ್ಕೆ ತೆರೆ ಎಳೆಯಲು ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದ್ದು, ಪ್ರಕರಣ ಮತ್ತೆ ಬೇರೆಯದ್ದೇ ಟ್ವಿಸ್ಟ್ ಪಡೆದುಕೊಳ್ಳುವ ಸಾಧ್ಯತೆಯಿದೆ.
ಎಪಿಎಂಸಿ ಠಾಣೆ ಇನ್ಸಪೆಕ್ಟರ್ ಪ್ರಭು ಸೂರಿನ್ ದೂರರಾಗಿದ್ದ ಪ್ರಕರಣದಲ್ಲಿ ವಕೀಲ ವಿನೋದ ಪಾಟೀಲ ಮೇಲೆ 353 ಕೇಸ್ ದಾಖಲು ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ಸಮಯದಲ್ಲಿ ವಕೀಲ ವಿನೋದ ಪಾಟೀಲರಿಗೆ ಕೈಗೆ ಬೇಡಿ ಹಾಕಲಾಗಿದ್ದ ಪ್ರಕರಣ ಬೇರೆ ಸ್ವರೂಪವನ್ನೇ ಪಡೆದಿದೆ.
ವಕೀಲ ವಿನೋದ ಪಾಟೀಲರ ಪರವಾಗಿ ವಕೀಲರು ಹೋರಾಟ ಮಾಡಿ, ಕೈಗೆ ಬೇಡಿ ಹಾಕಿರುವುದನ್ನ ಮಾನವ ಹಕ್ಕು ಉಲ್ಲಂಘನೆ ಮಾಡಲಾಗಿದೆ ಎಂದು ದೂರು ನೀಡಿ, ಇನ್ಸಪೆಕ್ಟರ್ ಪ್ರಭು ಸೂರಿನ್ ಮೇಲೆ ಕ್ರಮವನ್ನ ಜರುಗಿಸುವಂತೆ ಆಗ್ರಹಿಸಿದ್ದರು. ಇದೇ ಪ್ರಕರಣದಲ್ಲಿ ವಕೀಲರು ಹಾಗೂ ಪೊಲೀಸರ ನಡುವೆ ಕಾದಾಟ ಆರಂಭವಾಗಿತ್ತು.
ಕೊನೆಗೆ ಗೊಂದಲದಲ್ಲಿದ್ದ ಪೊಲೀಸ್ ಕಾನ್ಸಟೇಬಲ್ ಸಂತೋಷಕುಮಾರ ಕಾಳೆ ಎಂಬಾತರನ್ನ ಅಮಾನತ್ತು ಮಾಡಿ, ಆದೇಶ ಹೊರಡಿಸಲಾಗಿದೆ. ಕೊನೆಗೂ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ಬದಲಾಗಿ ಕಾನ್ಸಟೇಬಲ್ ಅಮಾನತ್ತು ಮಾಡುವ ಮೂಲಕ, ಮತ್ತೆ ಅಧಿಕಾರಿಗಳನ್ನ ಉಳಿಸುವುದಕ್ಕೆ ಮುಂದಾಗಿರುವುದು ಗೋಚರವಾಗುತ್ತಿದೆ.