ತಂದೆ ಸಾವಿನ ನೋವಿನಲ್ಲಿ ಗರ್ಭೀಣಿ ಹೆಂಡತಿ ಜೊತೆ ಮಾತಾಡುತ್ತಲೇ ಪ್ರಾಣ ಬಿಟ್ಟ ಹುಬ್ಬಳ್ಳಿಯ ಕಾರ್ಮಿಕ
1 min read
ಹುಬ್ಬಳ್ಳಿ: ತಂದೆಯ ಸಾವಿನಿಂದ ಮನನೊಂದು ವ್ಯಕ್ತಿಯೊಬ್ಬ ಗರ್ಭಿಣಿ ಹೆಂಡತಿಯ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಮೋಹನ ಸಿಂಗ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ. ಕಳೆದ ಎರಡು ತಿಂಗಳ ಹಿಂದೆ ಪಶ್ಚಿಮಬಂಗಾಳದಿಂದ ಕೆಲಸಕ್ಕೆಂದು ಬಂದು ಹುಬ್ಬಳ್ಳಿಯ ತಾರಿಹಾಳದ ಫೇವರ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡು, ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಈತನ ತಂದೆಯ ಸಾವಿನ ನಂತರ ಮನನೊಂದು ತನ್ನ ತುಂಬು ಗರ್ಭಿಣಿ ಹೆಂಡತಿಯ ಜೊತೆ ಮಾತನಾಡುತ್ತಲೇ ತಾನು ನೇಣಿಗೆ ಶರಣಾಗಿದ್ದಾನೆ.
ತಕ್ಷಣ ಮೋಹನಸಿಂಗ್ ಹೆಂಡತಿ ಜಿನುಪ ಸಿಂಗ್ ಗಂಡನ ಜೊತೆ ಕೆಲಸ ಮಾಡುವ ಸಹ ಕಾರ್ಮಿಕ ಶುಭಾಷಿನ ಎಂಬಾತನಿಗೆ ಕರೆ ಮಾಡಿ ನನ್ನ ಗಂಡ ಹೀಗೆ ಮಾಡುತ್ತಿದ್ದಾನ್ನೇ ಎಂದು ಹೇಳಿದ್ದಾಳೆ. ಅಷ್ಟರಲ್ಲಿಯೇ ಅಲ್ಲಿಗೆ ಹೋದವರು, ನೇಣಿನಲ್ಲಿದ್ದವನನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ.
ಘಟನೆಯ ಬಗ್ಗೆ ಕಾರ್ಮಿಕನ ಕುಟುಂಬಕ್ಕೆ ಪೊಲೀಸರು ಮಾಹಿತಿ ನೀಡಿದ್ದು, ನಾಳೆಯವರೆಗೆ ಪಶ್ಚಿಮ ಬಂಗಾಳದಿಂದ ಬರುವ ನಿರೀಕ್ಷೆಯಿದೆ. ಶವವನ್ನ ಕಿಮ್ಸನ ಶವಾಗಾರದಲ್ಲಿಡಲಾಗಿದ್ದು, ಪ್ರಕರಣ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.