ಕೂಡಿ ಬಾಳೋಣ ಎಂದೆಂದೂ ಕೂಡಿ ನಲಿಯೋಣ: ಖುಷಿಯಲ್ಲೂ ಸಂಕಷ್ಟದಲ್ಲೂ ಕೆಎಸ್ಸಾರ್ಟಿಸಿ ನೌಕರರು ಒಂದೇ..!
1 min read
ಹುಬ್ಬಳ್ಳಿ: ರಾಜ್ಯದಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಯುತ್ತಿದ್ದಾಗಲೇ ಸಾರಿಗೆ ನೌಕರರು ಸಂಕಷ್ಟವನ್ನ ಎದುರಿಸುತ್ತಿದ್ದಾರೆ. ಬಸ್ ಸಂಚಾರ ಬಂದ್ ಆಗಿದ್ದರಿಂದ ನೌಕರರು ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅದಕ್ಕೆ ಸಾರಿಗೆ ಸಿಬ್ಬಂದಿಯೇ ಹುಬ್ಬಳ್ಳಿಯಲ್ಲಿ ವ್ಯವಸ್ಥೆ ಮಾಡಿದ್ದು, ಬಸ್ ನಿಲ್ದಾಣವೇ ಊಟದ ಅಂಗಳವಾಗಿದೆ.
ಹುಬ್ಬಳ್ಳಿಗೆ ಬಂದಿರುವ ಬೇರೆ ಬೇರೆ ಜಿಲ್ಲೆಗಳ ಚಾಲಕ, ನಿರ್ವಾಹಕರಿಗೆ ಬಸ್ ನಿಲ್ದಾಣದಲ್ಲಿಯೇ ಊಟದ ವ್ಯವಸ್ಥೆಯನ್ನ ಮಾಡುವ ಮೂಲಕ ತಾವುಗಳು ಕಷ್ಟದಲ್ಲಿಯೂ ಸುಖದಲ್ಲಿಯೂ ಒಂದೇ ಆಗಿರುತ್ತೇವೆ ಎಂಬ ಸಂದೇಶ ಸಾರುತ್ತಿದ್ದಾರೆ.
ಕಳೆದ ಎರಡು ದಿನದಿಂದ ಸಾರಿಗೆ ನೌಕರರನ್ನ ಸರಕಾರಿ ನೌಕರರು ಎಂದು ಪರಿಗಣಿಸಿ ಎಂಬ ಬೇಡಿಕೆಯೊಂದಿಗೆ ಹೋರಾಟ ಆರಂಭವಾಗಿದ್ದು, ಸರಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡದ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳ ಬಸ್ಸಗಳು, ಎಲ್ಲೇಲ್ಲಿ ಇವೇಯೋ ಅಲ್ಲಿಯೇ ಉಳಿದುಕೊಂಡಿವೆ.
ಇದರಿಂದ ಹುಬ್ಬಳ್ಳಿಯಲ್ಲಿ ನೂರಾರೂ ಚಾಲಕರು, ನಿರ್ವಾಹಕರು ಉಳಿಯುವಂತಾಗಿದೆ. ಅವರೆಲ್ಲರನ್ನೂ ತಮ್ಮ ಮನೆಯವರಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನ ಹುಬ್ಬಳ್ಳಿಯ ನೌಕರರು ಮಾಡಿದ್ದು, ಹೋರಾಟಕ್ಕೆ ಸಿದ್ಧವೆನ್ನುವ ಸಂದೇಶವನ್ನೂ ಸಾರುತ್ತಿದ್ದಾರೆ.