ಹುಬ್ಬಳ್ಳಿ ಕಿಮ್ಸನ ಎರಡನೇಯ ಮಹಡಿಯಿಂದ ಬಿದ್ದು ದುರ್ಮರಣ
1 min read
ಹುಬ್ಬಳ್ಳಿ: ಕಿಮ್ಸನ ಎರಡನೇಯ ಮಹಡಿಯ ಮೇಲೆ ಪೇಟಿಂಗ್ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಆಯತಪ್ಪಿ ಬಿದ್ದು ವ್ಯಕ್ತಿಯೋರ್ವ ಸಾವಿಗೀಡಾದ ಘಟನೆ ಈಗಷ್ಟೇ ನಡೆದಿದೆ.
ಧಾರವಾಡ ನಿವಾಸಿಯಾದ ರಾಘವೇಂದ್ರ ಎಂಬ ವ್ಯಕ್ತಿಯೇ ಸಾವಿಗೀಡಾಗಿದ್ದು, ಕಳೆದ ವಾರದಿಂದ ಬಣ್ಣ ಹಚ್ಚುವ ಕೆಲಸವನ್ನ ಮಾಡುತ್ತಿದ್ದ. ಇಂದು ಕೂಡಾ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದಾಗ, ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.
ಎರಡನೇಯ ಮಹಡಿಯಿಂದ ಬಿದ್ದ ತಕ್ಷಣವೇ ಪಕ್ಕದಲ್ಲಿಯೇ ಇದ್ದ ತುರ್ತು ಚಿಕಿತ್ಸೆ ಘಟಕಕ್ಕೆ ತೆಗೆದುಕೊಂಡು ಹೋಗಲಾಗಿತ್ತಾದರೂ, ಅಷ್ಟರಲ್ಲೇ ಪ್ರಾಣ ಪಕ್ಷಿ ಹಾರಿ ಹೋಗಿದ್ದು, ಕಿಮ್ಸ ಆವರಣದಲ್ಲಿ ಆತಂಕದ ಛಾಯೆ ಮೂಡಿದೆ.
ಎರಡನೇಯ ಮಹಡಿಯಲ್ಲಿ ಪೇಟಿಂಗ್ ಮಾಡುತ್ತಿದ್ದ ವೇಳೆಯಲ್ಲಿ ಮುಂಜಾಗ್ರತೆ ಕ್ರಮಗಳನ್ನ ತೆಗೆದುಕೊಳ್ಳದೇ ಇರುವುದೇ ದುರ್ಘಟನೆಗೆ ಕಾರಣವಾಗಿದ್ದು, ಗುತ್ತಿಗೆದಾರನ ಮೇಲೆ ಕೆಲವರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ. ಪ್ರಕರಣ ಬಗ್ಗೆ ಮಾಹಿತಿ ಪಡೆದ ವಿದ್ಯಾನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.