ಸರಕಾರಿ ಶಾಲೆ ಮುಖ್ಯ ಶಿಕ್ಷಕ ಅಪಹರಣ: ಪುತ್ರನಿಂದ ಪೊಲೀಸ್ ಪ್ರಕರಣ
1 min read
ಧಾರವಾಡ: ತಾವೂ ಕೆಲಸ ಮಾಡುತ್ತಿದ್ದ ಸರಕಾರಿ ಶಾಲೆಗೆ ಬೈಕಿನಲ್ಲಿ ಹೊರಟಿದ್ದ ಮುಖ್ಯ ಶಿಕ್ಷಕರನ್ನ ಕಲಘಟಗಿ ತಾಲೂಕಿನ ಹಿಂಡಸಗೇರಿ ಬೇಡ್ತಿ ಹಳ್ಳದ ಸೇತುವೆಯ ಅಪಹರಣ ಮಾಡಿರುವ ಪ್ರಕರಣ ನಡೆದಿದೆ.
ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದ ಸರಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಕಾಂತ ಜಾಲಿಸತಕಿ ಎಂಬುವವರೇ ಅಪಹರಣಕ್ಕೆ ಒಳಗಾಗಿದ್ದಾರೆ. ಈ ಕುರಿತು ಶಿಕ್ಷಕರ ಪುತ್ರ ಹರ್ಷಿತ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಶಿಕ್ಷಕರ ಅಪಹರಣದ ಹಿಂದೆ ಹಣಕಾಸಿನ ವ್ಯವಹಾರ ಇದೆಯಂದು ದೂರಲಾಗಿದೆ.
ಕುಂದಾಪುರದ ಜಯಚಂದ್ರ ವೆಂಕಟರಮಣ ಗೋವೆಬೆಟ್ಟ ಹಾಗೂ ಬೆಳತಂಗಡಿಯ ದಿನೇಶ ವಾಮನ ಎಂಬುವವರೇ ತಮ್ಮ ತಂದೆಯನ್ನ ಅಪಹರಣ ಮಾಡಿದ್ದಾರೆಂದು ದೂರಿನಲ್ಲಿ ದಾಖಲು ಮಾಡಿದ್ದಾರೆ. ಆರೋಪಿಗಳು ಕಾರಿನಲ್ಲಿ ಬಂದು ತಮ್ಮ ತಂದೆಯನ್ನ ಕಿಡ್ನಾಪ್ ಮಾಡಿದ್ದಾರೆಂದು ಕೂಡಾ ಮುಖ್ಯ ಶಿಕ್ಷಕರ ಪುತ್ರ ಹೇಳಿಕೊಂಡಿದ್ದಾರೆ.
ಕಲಘಟಗಿ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ಹುಡುಕಾಟ ನಡೆಸಿದ್ದು, ಕುಂದಾಪುರ ಪೊಲೀಸ್ ಠಾಣೆಗೆ ಮಾಹಿತಿಯನ್ನ ರವಾನೆ ಮಾಡಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.