ರಾಘವೇಂದ್ರ ಕಾಲನಿಯಲ್ಲಿ ಸರಣಿ ಮನೆಕಳ್ಳತನ

ಕಲಬುರಗಿ: ನಿದ್ದೆಯ ಮಂಪರಿನಲ್ಲಿ ಮಲಗಿದ್ದ ಮನೆಯವರಿಗೆ ಏನೂ ಗೊತ್ತಾಗದ ಹಾಗೇ ಮನೆಯಲ್ಲಿನ ನಗ-ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ಕಲಬುರಗಿ ಪಟ್ಟಣದ ರಾಘವೇಂದ್ರ ಕಾಲನಿಯಲ್ಲಿ ನಡೆದಿದೆ.
ಬೆಳಿಗ್ಗೆ ಎದ್ದು ಮನೆಯಲ್ಲಿ ನೋಡಿದಾಗ ಕಳ್ಳತನ ಪ್ರಕರಣಗಳು ಬಯಲಿಗೆ ಬಂದಿದ್ದು, ಎರಡು ಮನೆಗಳಲ್ಲಿ ಸಾವಿರಾರು ಸೂಪಾಯಿ ನಗದು ಹಾಗೂ ಚಿನ್ನವನ್ನ ಕಳ್ಳತನ ಮಾಡಿದ್ದು, ಮನೆಯಲ್ಲಿ ಯಾರಿಗೂ ಗೊತ್ತಾಗತ್ತೆ ಇರುವುದು ಅಚ್ಚರಿ ಮೂಡಿಸಿದೆ.
ಬೆಳಗಿನ ಜಾವ ಮೂರರಿಂದ ಐದು ಗಂಟೆಯ ನಡುವೆ ಕಳ್ಳತನ ನಡೆದಿರಬಹುದೆಂದು ಶಂಕಿಸಲಾಗಿದ್ದು, ಪ್ರಕರಣ ನೋಡಿ ಮನೆಯವರು ಕಣ್ಣೀರಿಡುತ್ತಿದ್ದರು. ಮನೆಯಲ್ಲಿ ಜೋಪಾನವಾಗಿ ಅಲ್ಮೇರಾದಲ್ಲಿಟ್ಟಿದ್ದ ವಸ್ತುಗಳನ್ನ ದೋಚಲಾಗಿದೆ.
ರಾಘವೇಂದ್ರ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಎರಡು ಮನೆಯಲ್ಲಿ ನಾಲ್ಕಕ್ಕಿಂತ ಹೆಚ್ಚು ಜನರಿದ್ದರೂ ಕಳ್ಳರು, ತಮ್ಮ ಕೈ ಚಳಕ ತೋರಿಸಿ ಪರಾರಿಯಾಗಿದ್ದಾರೆ.