ಕಲಘಟಗಿಯಿಂದ ಹೊರಟು ನಿಂತರು ಇನ್ಸಪೆಕ್ಟರ್ ವಿಜಯ ಬಿರಾದಾರ..!
1 min read
ಧಾರವಾಡ: ಜಿಲ್ಲೆಯ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಬರೋಬ್ಬರಿ ಮೂರುವರ್ಷ ಸೇವೆ ಸಲ್ಲಿಸಿದ್ದ ಇನ್ಸಪೆಕ್ಟರ್ ವಿಜಯ ಬಿರಾದಾರ ಇಂದು ಕಲಘಟಗಿಯಿಂದ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಹೊರಟು ನಿಂತಿದ್ದಾರೆ.
ಮಾಜಿ ಸಚಿವ ಸಂತೋಷ ಲಾಡ ಇದ್ದಾಗಲೇ ದಕ್ಷ ಅಧಿಕಾರಿ ಎಂಬ ಕಾರಣಕ್ಕೆ ಕರೆತರಲಾಗಿತ್ತು. ಅದಾದ ನಂತರವೂ ಹಾಲಿ ಶಾಸಕ ಸಿ.ಎಂ.ನಿಂಬಣ್ಣನವರ ಕೂಡಾ ವಿಜಯ ಬಿರಾದಾರ ಅವರ ಕಾರ್ಯಕ್ಷಮತೆಯನ್ನ ನೋಡಿ, ಹಾಗೇಯೇ ಮುಂದುವರೆಸಿದ್ದರು.
ಧಾರವಾಡ ಸಿಇಎನ್ ಪೊಲೀಸ್ ಠಾಣೆಗೆ ವಿಜಯ ಬಿರಾದಾರ ವರ್ಗಾವಣೆಯಾಗಿದ್ದು, ಇಂದು ಕಲಘಟಗಿ ಠಾಣೆಯಿಂದ ನಿರ್ಗಮಿಸಿದರು. ಈ ಸಮಯದಲ್ಲಿ ಮುಕ್ಕಲ ಗ್ರಾಮ ಪಂಚಾಯತಿ ಸದಸ್ಯ ನಿಂಗರೆಡ್ಡಿ ನಡುವಿನಮನಿ ಸೇರಿದಂತೆ ಹಲವರು ಇನ್ಸಪೆಕ್ಟರ್ ಬಿರಾದಾರ ಅವರನ್ನ ಸತ್ಕರಿಸಿ, ಬೀಳ್ಕೋಟ್ಟರು.
ವಿಜಯ ಬಿರಾದಾರ ಧಾರವಾಡ ಜಿಲ್ಲೆಯಲ್ಲಿ ದಕ್ಷ ಅಧಿಕಾರಿಯಾಗಿದ್ದು, ಅವರ ಸೇವೆ ಕಲಘಟಗಿಯಲ್ಲಿ ಹಲವು ಅಕ್ರಮಗಳನ್ನ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದರು.