ಅನ್ನದ ಋಣಕ್ಕಾಗಿ ರೈತರಿಗೆ ಬೆಂಬಲ ನೀಡಿದ ಯೋಧನನ್ನೇ ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿದ ಪೊಲೀಸರು..!
1 min read
ಹುಬ್ಬಳ್ಳಿ: ನನಗೆ ಅನ್ನದ ಋಣವಿದೆ. ಹಾಗಾಗಿಯೇ ರಜೆಯಲ್ಲಿದ್ದರೂ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಲು ಯೂನಿಫಾರ್ಮನೊಂದಿಗೆ ಬಂದಿದ್ದೇನೆ. ನನಗೆ ಯಾವುದೇ ಪಕ್ಷಗಳು ಬೇಕಾಗಿಲ್ಲ. ರೈತರಿಗೆ ಅನ್ಯಾಯವಾಗಬಾರದೆಂದು ಹೇಳುತ್ತಲೇ, ಯೂನಿಫಾರ್ಮ್ಮೇಲೆ ಹಸಿರು ಟವೆಲ್ ಹಾಕಿ ಪ್ರತಿಭಟನೆ ನಡೆಸಿದ ಯೋಧನನ್ನ ಪೊಲೀಸರು ವಶಕ್ಕೆ ಪಡೆದು ಸುಮಾರು ಎರಡು ಗಂಟೆಯಿಂದಲೂ ಠಾಣೆಯಲ್ಲೇ ಕೂಡಿ ಹಾಕಿರುವ ಘಟನೆ ನಡೆದಿದೆ.
ಯೋಧನ ನಡೆಸಿಕೊಂಡಿದ್ದು ಹೇಗೆ ವೀಡಿಯೋ ಇದೆ ನೋಡಿ..
ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದ ರಮೇಶ ಮಾಡಳ್ಳಿ ಎಂಬ ಯೋಧ ರಜೆಗಾಗಿ ತನ್ನೂರಿಗೆ ಬಂದಿದ್ದಾನೆ. ರೈತರ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ತಾನೂ ಧ್ವನಿಯೆತ್ತುವ ಉದ್ದೇಶದಿಂದ ಚೆನ್ನಮ್ಮ ವೃತ್ತದಲ್ಲೇ ಕೆಲಕಾಲ ಧರಣಿ ನಡೆಸಿದರು. ಇನ್ನೂ ಪ್ರತಿಭಟನೆ ಮಾಡಬೇಕೆಂದು ಕೂತಾಗ ಪೊಲೀಸರು ಬಂದು ಅವರನ್ನ ವಶಕ್ಕೆ ಪಡೆದಿದ್ದಾರೆ.
ಯೋಧನನ್ನ ವಶಕ್ಕೆ ಪಡೆದು ಅದಾಗಲೇ ಎರಡು ಗಂಟೆಗೂ ಹೆಚ್ಚು ಕಾಲವಾದರೂ ಇನ್ನೂ ಠಾಣೆಯಲ್ಲಿಯೇ ಕೂಡಿ ಹಾಕಿರುವುದು ಯೋಧನಿಗೆ ಕೊಡುವ ಗೌರವವಾ.. ? ಎಂದು ಪ್ರಶ್ನಿಸುವಂತಾಗಿದೆ. ರೈತರ ಪರವಾಗಿ ಬಂದ ಯೋಧನ ಸ್ಥಿತಿ ಹೀಗೆ ಆಗಿರುವುದು ಪ್ರಜ್ಞಾವಂತರಲ್ಲಿ ಅಸಹ್ಯ ಮೂಡಿಸಿದೆ.
ಹುಬ್ಬಳ್ಳಿ ಉಪನಗರ ಠಾಣೆಯಲ್ಲಿಯೇ ಯೋಧ ರಮೇಶ ಅವರನ್ನ ಇಡಲಾಗಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಿದ್ದರ ಬಗ್ಗೆ ವಿಚಾರಣೆ ಮಾಡುತ್ತಿದ್ದಾರೆ. ಜೈ ಕಿಸಾನಗೆ ಜವಾನರೋರ್ವರು ಜೈ ಹೇಳಲು ಬಂದಿರುವುದೇ ತಪ್ಪಾಗಿದೆ ಎನ್ನುವ ಹಾಗೇ ಪೊಲೀಸರು ನಡೆದುಕೊಳ್ಳುತ್ತಿರುವುದನ್ನ ನೋಡಿದ್ರೇ, ಇದು ಅನ್ಯಾಯದ ಪರಮಾವಧಿ ಎನ್ನದೇ ವಿಧಿಯಿಲ್ಲವಲ್ಲವೇ..