ತಕ್ಕಡಿ ಸಮೇತ ಬಂದ ಇಸ್ಕಾನ್: ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ ವಿತರಣೆ
1 min read
ಹುಬ್ಬಳ್ಳಿ: ಸರಕಾರ ಮಕ್ಕಳಿಗೆ ಬಿಸಿಯೂಟದ ಬದಲಾಗಿ ಆಹಾರ ಧಾನ್ಯಗಳನ್ನ ವಿತರಣೆ ಮಾಡುತ್ತಿದ್ದು, ಅದು ಸರಿಯಾಗಿ ತಲುಪಲಿ ಎಂಬ ಉದ್ದೇಶದಿಂದ ಇಸ್ಕಾನ್ ತಕ್ಕಡಿ ಸಮೇತ ಶಾಲೆಗಳಿಗೆ ಬಂದು ವಿದ್ಯಾರ್ಥಿಗಳಿಗೆ ಆಹಾರ ಧಾನ್ಯವನ್ನ ವಿತರಣೆ ಮಾಡುತ್ತಿದ್ದಾರೆ.
ಸುತಗಟ್ಟಿಯ ಸರಕಾರಿ ಪ್ರಾಥಮಿಕ ಶಾಲೆಗೆ ಆಗಮಿಸಿದ ಇಸ್ಕಾನ್ ತಂಡವೂ ತಕ್ಕಡಿಯಲ್ಲಿ 4ಕೆಜಿ 500 ಗ್ರಾಂ ಅಕ್ಕಿ, 800 ಗ್ರಾಂ ಗೋಧಿಯನ್ನ ಹಂಚಿಕೆ ಮಾಡುತ್ತಿದ್ದಾರೆ. 6ನೇ ತರಗತಿಯಿಂದ 8ನೇ ತರಗತಿವರೆಗೆ 6ಕೆಜಿ 750 ಗ್ರಾಂ ಗೋಧಿ ಹಂಚಿಕೆ ಮಾಡುತ್ತಿದ್ದಾರೆ.
ಸುಗತಟ್ಟಿ ಶಾಲೆಯಲ್ಲಿ ಮಕ್ಕಳಿಗೆ ಆಹಾರ ಧಾನ್ಯ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಶಾಲೆಯ ಎಸ್ ಡಿಎಂಸಿ ಪ್ರಮುಖರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕಿಯರು ಹಾಜರಿದ್ದು, ವಿದ್ಯಾರ್ಥಿಗಳಿಗೆ ಕೋವಿಡ್-19 ಮಾರ್ಗಸೂಚಿಗಳ ಪ್ರಕಾರ ಸೋಷಿಯಲ್ ಡಿಸ್ಟನ್ಸ್ ಮೂಲಕ ವಿತರಣೆ ಮಾಡಲಾಯಿತು.
ಈ ಹಿಂದೆ ಕೆಲವು ಶಾಲೆಗಳಲ್ಲಿ ಆಹಾರ ಧಾನ್ಯ ವಿತರಣೆ ಸಮಯದಲ್ಲಿ ಕಡಿಮೆ ತೂಕ ಕೊಡಲಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಜಾಗ್ರತೆ ವಹಿಸಿರುವ ಇಸ್ಕಾನ್, ತಕ್ಕಡಿಯೊಂದಿಗೆ ಬಂದು ವಿತರಣೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.