ಐಜಿಪಿ ರಾಘವೇಂದ್ರ ಸುಹಾಸರಿಗೆ ಕೊರೋನಾ ಪಾಸಿಟಿವ್
1 min read
ಬೆಳಗಾವಿ: ಹುಬ್ಬಳ್ಳಿ-ಧಾರವಾಡ ಪ್ರಭಾರಿ ಪೊಲೀಸ್ ಕಮೀಷನರ್ ಆಗಿ, ಅಂದರ್-ಬಾಹರ್ ರೇಡ್ ಮಾಡಿ ಪ್ರಮುಖರನ್ನ ಬಂಧನ ಮಾಡಿದ್ದ ಉತ್ತರ ವಲಯ ಐಜಿ ರಾಘವೇಂದ್ರ ಸುಹಾಸ್ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಬೆಳಗಾವಿಯ ಕೆಎಲ್ಇ ಸಂಸ್ಥೆಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಘವೇಂದ್ರ ಸುಹಾಸ ಅವರಿಗೆ ಜ್ವರ ಮತ್ತು ಕೆಮ್ಮು ಹೆಚ್ಚಾಗಿತ್ತು. ಈ ಸಂಬಂಧ ಕೋವಿಡ್-19 ತಪಾಸಣೆ ಮಾಡಿಸಿದಾಗ, ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಕೆಲವು ದಿನಗಳಿಂದ ತಮ್ಮ ಸಂಪರ್ಕಕ್ಕೆ ಬಂದವರು ತಪಾಸಣೆ ಮಾಡಿಸಿಕೊಳ್ಳುವಂತೆ ರಾಘವೇಂದ್ರ ಸುಹಾಸ ವಿನಂತಿಸಿಕೊಂಡಿದ್ದು, ಈ ಮೊದಲು ಕಾನೂನು ವ್ಯವಸ್ಥೆಯ ಬಗ್ಗೆ ಅಧಿಕಾರಿಗಳೊಂದಿಗೆ ಸಭೆಯನ್ನ ನಡೆಸಿದ್ದರೆಂದು ಹೇಳಲಾಗಿದೆ.
ಆರೋಗ್ಯದಲ್ಲಿ ಸುಧಾರಣೆ ಕೂಡಾ ಕಂಡು ಬರುತ್ತಿದ್ದು, ಯಾವುದೇ ರೀತಿಯ ತೊಂದರೆಯಿಲ್ಲ ಎಂದು ಹೇಳಲಾಗಿದೆ.